ಪೆಗಾಸಸ್ ಬೇಹುಗಾರಿಕೆಯ ಪಟ್ಟಿಯಲ್ಲಿ ದಲಾಯಿ ಲಾಮಾ ಆಪ್ತ ಸಲಹೆಗಾರನ ಹೆಸರು: ವರದಿ

Update: 2021-07-22 14:15 GMT

ಹೊಸದಿಲ್ಲಿ: ಇಸ್ರೇಲ್ ಬೇಹುಗಾರಿಕೆ ಸಾಫ್ಟ್ ವೇರ್ ಪೆಗಾಸಸ್‌ ಬಳಸಿಕೊಂಡು  ಸಂಭಾವ್ಯ ಕಣ್ಗಾವಲು ಗುರಿಗಳ ಪಟ್ಟಿಯಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾ ಅವರ ಆಪ್ತ  ಸಲಹೆಗಾರರ ಹೆಸರು ಪತ್ತೆಯಾಗಿದೆ ಎಂದು ಸುದ್ದಿ ವೆಬ್‌ಸೈಟ್ ದಿ ವೈರ್ ಗುರುವಾರ ವರದಿ ಮಾಡಿದೆ.

ಇತರ ಬೌದ್ಧ ಧರ್ಮಗುರುಗಳು, ಹಲವಾರು ಟಿಬೆಟಿಯನ್ ಅಧಿಕಾರಿಗಳು ಹಾಗೂ  ಕಾರ್ಯಕರ್ತರ ಫೋನ್ ಸಂಖ್ಯೆಗಳು ಸೋರಿಕೆಯಾದ ದತ್ತಾಂಶದಲ್ಲಿ ಕಂಡುಬಂದಿವೆ. ಅದು 2017 ರ ಅಂತ್ಯದಿಂದ 2019 ರ ಆರಂಭದವರೆಗೆ ನಿಗಾ ವಹಿಸಿರುವದನ್ನು ಸೂಚಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರು ಹಾಗೂ  ಡಝನ್ ಗಟ್ಟಲೆ ಪತ್ರಕರ್ತರು ಈ ವಾರದ ಆರಂಭದಲ್ಲಿ ಪೆಗಾಸಸ್ ಗುರಿಗಳ ಪಟ್ಟಿಯಲ್ಲಿ ಕಂಡುಬಂದಿದ್ದು, ಪೆಗಾಸಸ್  ಹಗರಣವನ್ನು  ಪ್ರತಿಪಕ್ಷಗಳು ಅಮೆರಿಕದಲ್ಲಿ ನಡೆದಿದ್ದ  "ವಾಟರ್ ಗೇಟ್ ಹಗರಣಕ್ಕಿಂತ ದೊಡ್ಡದು" ಎಂದು ಕರೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News