×
Ad

ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಮಾರಂಭದಲ್ಲಿ ಬ್ಯಾಟಿಂಗ್ ಅನುಕರಿಸಿದ ನವಜೋತ್ ಸಿಧು

Update: 2021-07-23 15:21 IST

ಚಂಡಿಗಡ: ಹೊಸದಾಗಿ ನೇಮಕಗೊಂಡ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಚಂಡಿಗಢದ ಪಂಜಾಬ್ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆದ ಸಮಾರಂಭವನ್ನುದ್ದೇಶಿಸಿ ಮಾತನಾಡುವ  ಮೊದಲು ವೇದಿಕೆಯ ಮೇಲೆ ಬ್ಯಾಟಿಂಗ್ ಶೈಲಿಯನ್ನು ಅನುಕರಿಸುವ ಮೂಲಕ ಎಲ್ಲರ ಗಮನ ಸೆಳೆದರು.

ವೇದಿಕೆಯಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ನಿರ್ಗಮನ ರಾಜ್ಯಾಧ್ಯಕ್ಷ ಸುನೀಲ್ ಜಾಖರ್ ಜೊತೆಗೆ  ಕುಳಿತ್ತಿದ್ದ ನವಜೋತ್ ಸಿಂಗ್ ಸಿಧು ಅವರ  ಹೆಸರನ್ನು ನಿರೂಪಕರು ಕರೆಯುತ್ತಿದ್ದಂತೆ, ಭಾರತದ ಮಾಜಿ ಬ್ಯಾಟ್ಸ್‌ಮನ್ ಎದ್ದುನಿಂತು ಕ್ರಿಕೆಟ್ ಚೆಂಡನ್ನು ಹೊಡೆಯುವ ರೀತಿ ಕೈಗಳನ್ನು ಬೀಸಿದರು.  ರಾಜ್ಯಾಧ್ಯಕ್ಷರಾಗಿ  ಅಧಿಕಾರ ಸ್ವೀಕಾರ  ಸಮಾರಂಭದಲ್ಲಿ ಭಾಷಣ ಮಾಡುವ ಮೊದಲು  ವೇದಿಕೆಯಲ್ಲಿ ಒಂದಿಬ್ಬರು ಹಿರಿಯರ ಪಾದಗಳನ್ನು ಮುಟ್ಟಿ  ನಮಸ್ಕರಿಸಿದರು.

" ಪಕ್ಷದ ಸಾಮಾನ್ಯ ಕಾರ್ಯಕರ್ತ ಹಾಗೂ  ರಾಜ್ಯ ಘಟಕದ ಮುಖ್ಯಸ್ಥರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಪಂಜಾಬ್‌ನ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಇಂದಿನಿಂದ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದಾರೆ" ಎಂದು ಸಿಧು ಅವರು ತಮ್ಮ ಆರಂಭಿಕ ನುಡಿಗಳಲ್ಲಿ ಹೇಳಿದಾಗ ಕಾರ್ಯಕರ್ತರು ಚಪ್ಪಾಳೆ ತಟ್ಟಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News