ಎನ್‍ಐಎ ಆಕ್ಷೇಪ: ಸ್ಟ್ಯಾನ್ ಸ್ವಾಮಿಯನ್ನು ಶ್ಲಾಘಿಸಿದ್ದ ಹೇಳಿಕೆ ವಾಪಸ್ ಪಡೆದ ಬಾಂಬೆ ಹೈಕೋರ್ಟ್ ನ್ಯಾಯಾಧೀಶ

Update: 2021-07-23 10:24 GMT

ಮುಂಬೈ : ಎಲ್ಗಾರ್ ಪರಿಷದ್-ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿದ್ದ ಹಾಗೂ ಇತ್ತೀಚೆಗೆ ನಿಧನರಾದ ಆದಿವಾಸಿ ಹಕ್ಕುಗಳ ಹೋರಾಟಗಾರ ಫಾ ಸ್ಟ್ಯಾನ್ ಸ್ವಾಮಿ ಅವರನ್ನು ಹೊಗಳಿ ಬಾಂಬೆ ಹೈಕೋರ್ಟ್ ಈ ಹಿಂದೆ ನೀಡಿದ್ದ ಮೌಖಿಕ ಹೇಳಿಕೆಗಳನ್ನು  ರಾಷ್ಟ್ರೀಯ ತನಿಖಾ ಏಜನ್ಸಿಯ ಆಕ್ಷೇಪದ ಹಿನ್ನೆಲೆಯಲ್ಲಿ ನ್ಯಾಯಾಲಯ ವಾಪಸ್ ಪಡೆದಿದೆ. ಸ್ಟ್ಯಾನ್ ಸ್ವಾಮಿ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ನಡೆದ ಮರಣೋತ್ತರ ವಿಚಾರಣೆ ಸಂದರ್ಭ ಎನ್‍ಐಎ ತನ್ನ ಆಕ್ಷೇಪ ಸೂಚಿಸಿತ್ತು.

ತಾವು ಫಾ ಸ್ವಾಮಿ ಅವರ ಅಂತ್ಯಕ್ರಿಯೆಯನ್ನು ನೀಡಿದ್ದಾಗಿ ಹಾಗೂ ಅವರು ಸಮಾಜಕ್ಕೆ ನೀಡಿದ್ದ ಸೇವೆಗಳಿಗೆ ತಾನು ಗೌರವ ನೀಡುತ್ತೇನೆ ಎಂದು  ಕಳೆದ ವಾರ ಜಸ್ಟಿಸ್ ಎಸ್ ಎಸ್ ಶಿಂಧೆ ಹೇಳಿದ್ದರು.

ಆದರೆ ಶುಕ್ರವಾರದ ವಿಚಾರಣೆ ವೇಳೆ ಈ ಮಾತುಗಳನ್ನು ವಾಪಸ್ ಪಡೆಯುವ ವೇಳೆ ಮಾತನಾಡಿದ ಜಸ್ಟಿಸ್ ಶಿಂಧೆ "ನಾನು ಹಾಗೆ ಹೇಳಿದ್ದೆ, ಆದರೆ ಕಾನೂನಾತ್ಮಕ ವಿಚಾರಗಳು ಬೇರೆ. ನಾನು ವೈಯಕ್ತಿಕವಾಗಿ ಏನಾದರೂ ಹೇಳಿದ್ದರಿಂದ ನಿಮಗೆ ನೋವಾಗಿದ್ರೆ ನನ್ನ ಮಾತುಗಳನ್ನು ವಾಪಸ್ ಪಡೆಯುತ್ತೇನೆ. ಆದರೆ ನೋಡಿ, ನಾವು ಕೂಡ ಮನುಷ್ಯರು ಹಾಗೂ ಈ ರೀತಿಯಾಗಿ ದಿಢೀರನೆ ನಡೆದುಬಿಡುತ್ತದೆ" ಎಂದು ಎನ್‍ಐಎ ಪರ ವಕೀಲರನ್ನುದ್ದೇಶಿಸಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News