ತೃಣಮೂಲದ ಸಂಸದೀಯ ಪಕ್ಷದ ಮುಖ್ಯಸ್ಥೆಯಾಗಿ ಮಮತಾ ಬ್ಯಾನರ್ಜಿ ನೇಮಕ

Update: 2021-07-23 14:11 GMT

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ ನ ಸಂಸದೀಯ ಪಕ್ಷದ ಹೊಸ ಅಧ್ಯಕ್ಷರಾಗಲಿದ್ದಾರೆ ಎಂದು ಸಂಸದ ಡೆರೆಕ್ ಒ'ಬ್ರಿಯೆನ್ ಶುಕ್ರವಾರ ಪ್ರಕಟಿಸಿದರು.

ಮಮತಾ ಅವರು ಮುಂದಿನ ವಾರ ಹೊಸದಿಲ್ಲಿ ಭೇಟಿಗೆ ಮುನ್ನ ಅವರು ಈ ನೇಮಕ ನಡೆದಿದೆ.

ಸಂಸದ ಸುದೀಪ್ ಬಂಡೋಪಾಧ್ಯಾಯರಿಂದ ಅಧಿಕಾರ ವಹಿಸಿಕೊಂಡ ಅವರು, ಸಂಸತ್ತಿಗೆ ಆಯ್ಕೆಯಾಗದೆ ತಮ್ಮ ಪಕ್ಷದ ಸಂಸದೀಯ ತಂಡದ ನೇತೃತ್ವ ವಹಿಸಿರುವ ಕೆಲವೇ ಕೆಲವು ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ. 1998 ರಲ್ಲಿ ಸೋನಿಯಾ ಗಾಂಧಿ ಅವರು ಪಕ್ಷದ ಮುಖ್ಯಸ್ಥರಾದಾಗ ಕಾಂಗ್ರೆಸ್ ಸಂಸದೀಯ ಪಕ್ಷವನ್ನು ಮುನ್ನಡೆಸಿದ್ದರು.

"ಮಮತಾ ಬ್ಯಾನರ್ಜಿ ನಮ್ಮ ತೃಣಮೂಲ ಸಂಸದೀಯ ಪಕ್ಷದ ಅಧ್ಯಕ್ಷರಾಗಲಿದ್ದಾರೆ. ಮಮತಾ ಬ್ಯಾನರ್ಜಿ ಅವರು ಏಳು ಬಾರಿ ಸಂಸದರಾಗಿದ್ದಾರೆ. ಅವರು ಈಗಾಗಲೇ ಸಂಸದೀಯ ಪಕ್ಷಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ಇದು ಕಾರ್ಯತಂತ್ರದ ನಿರ್ಧಾರ" ಎಂದು ದಿಲ್ಲಿಯಲ್ಲಿ ನಡೆದ  ಸುದ್ದಿಗೋಷ್ಠಿಯಲ್ಲಿ ಓ'ಬ್ರಿಯೆನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News