ಅಶ್ಲೀಲ ಚಿತ್ರ ತಯಾರಿ, ಮಾರಾಟ ಪ್ರಕರಣ: ಶಿಲ್ಪಾ ಶೆಟ್ಟಿ ಹೇಳಿಕೆ ಪಡೆದ ಮುಂಬೈ ಪೊಲೀಸರು
Update: 2021-07-23 20:05 IST
ಮುಂಬೈ: ಉದ್ಯಮಿ ರಾಜ್ ಕುಂದ್ರಾ ಅವರಿಗೆ ಸಂಬಂಧವಿದೆ ಎಂದು ಹೇಳಲಾದ ಅಶ್ಲೀಲ ಚಿತ್ರಗಳ ತಯಾರಿ ಹಾಗೂ ಮಾರಾಟ ಮಾಡಿದ ಪ್ರಕರಣದಲ್ಲಿ ರಾಜ್ ಕುಂದ್ರಾ ಪತ್ನಿ ಹಾಗೂ ನಟಿ ಶಿಲ್ಪಾ ಶೆಟ್ಟಿ ಅವರ ಹೇಳಿಕೆಯನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಶ್ಲೀಲ ಚಿತ್ರಗಳ ವ್ಯವಹಾರದೊಂದಿಗೆ ತನ್ನ ಪತಿಗೆ ಸಂಬಂಧವಿದೆ ಎಂಬ ವಿಚಾರ ಶಿಲ್ಪಾ ಶೆಟ್ಟಿಗೆ ತಿಳಿದಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಂದ್ರಾ ಅವರು ವಿಯಾನ್ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ ಹಾಗೂ ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದ ಮತ್ತೊಂದು ಕಂಪನಿಯಾದ ಕೆರ್ನಿನ್ ನೊಂದಿಗೆ ಹಣಕಾಸಿನ ವಹಿವಾಟುಗಳನ್ನು ವಿಯಾನ್ ಮೂಲಕ ನಡೆಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಕುಂದ್ರಾ ಅವರ ಬ್ಯಾಂಕ್ ಖಾತೆಗಳ ಸ್ಟೇಟ್ ಮೆಂಟ್ ಗಳು ಹಾಗೂ ಅವರ ಕಂಪನಿ ಮತ್ತು ಕೆರ್ನಿನ್ ನಡುವಿನ ವಹಿವಾಟುಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.