ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನುಗೆ ಪ್ರಧಾನಿ ಅಭಿನಂದನೆ

Update: 2021-07-24 09:55 GMT
photo: PTI

ಟೋಕಿಯೊ: ಇಲ್ಲಿನ ಟೋಕಿಯೊ ಕ್ರೀಡಾಕೂಟದಲ್ಲಿ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದ ವೇಟ್ ಲಿಫ್ಟರ್ ಮೀರಾ ಬಾಯಿ ಚಾನು ಅವರಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದರು.

"ಟೋಕಿಯೊ 2020 ಗೆ ಸಂತೋಷದಾಯಕ ಆರಂಭವನ್ನು ಒದಗಿಸಿಕೊಟ್ಟ ಚಾನು ಅವರ ಅದ್ಭುತ ಪ್ರದರ್ಶನದಿಂದ ಭಾರತವು ಉಲ್ಲಾಸಗೊಂಡಿದೆ. ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದಿರುವುದಕ್ಕೆ ಅವರಿಗೆ ಅಭಿನಂದಿಸುವೆ. ಅವರ ಯಶಸ್ಸು ಎಲ್ಲರಿಗೂ ಸ್ಫೂರ್ತಿಯಾಗಿದೆ’’ ಎಂದು ಪ್ರಧಾನಿ ಟ್ವಿಟಿಸಿದರು.

ಕ್ರೀಡಾ ಸಚಿವ ಅನುರಾಗ್ ಠಾಕೂರ್  ಹಾಗೂ ಮಾಜಿ ಕ್ರೀಡಾ ಸಚಿವ  ಕಿರಣ್ ರಿಜಿಜು ಕೂಡ ಚಾನುವಿಗೆ ಅಭಿನಂದಿಸಿದರು.

 "ಮೊದಲನೇ ದಿನದಂದು ಭಾರತಕ್ಕೆ ಮೊದಲ ಪದಕ! ಮೀರಾಬಾಯಿ ಚಾನು  ಮಹಿಳೆಯರ 49 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಸಿಲ್ವರ್ ಗೆದ್ದಿದ್ದಾರೆ! ಭಾರತವು ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತದೆ ಮೀರಾ!" ಎಂದು ಠಾಕೂರ್ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಚಾನು ಅವರ ಅದ್ಭುತ ಸಾಧನೆಗೆ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News