ಐಸಿಎಸ್‍ಇ 10, 12ನೇ ತರಗತಿಗಳ ಫಲಿತಾಂಶ ಪ್ರಕಟ

Update: 2021-07-24 10:57 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಐಸಿಎಸ್‍ಇ ಹತ್ತನೇ ತರಗತಿ ಹಾಗೂ ಐಎಸ್‍ಸಿ 12ನೇ ತರಗತಿ  ಫಲಿತಾಂಶಗಳನ್ನು ಇಂದು ಘೋಷಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ  ಫಲಿತಾಂಶವನ್ನು  ಮಂಡಳಿಯ ಅಧಿಕೃತ cisce.org ಅಥವಾ results.cisce.org. ವೆಬ್‍ಸೈಟ್‍ಗಳಲ್ಲಿ  ನೋಡಬಹುದು.

ಕೋವಿಡ್-19ರ 2ನೇ ಅಲೆ ಹಿನ್ನೆಲೆಯಲ್ಲಿ ಈ ಬಾರಿ 10ನೇ ಮತ್ತು 12ನೇ ತರಗತಿಗಳನ್ನು ಐಸಿಎಸ್‍ಇ ರದ್ದುಗೊಳಿಸಿತ್ತು. ಪರೀಕ್ಷಾ ಮಂಡಳಿ ನಿರ್ಧರಿಸಿದಂತೆ ಪರ್ಯಾಯ ಅಸೆಸ್ಮೆಂಟ್ ಆಧಾರದಲ್ಲಿ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.

ಈ ಬಾರಿ ವಿದ್ಯಾರ್ಥಿಗಳಿಗೆ ಇಂಪ್ಯೂಟೆಡ್ ಅಂಕಗಳನ್ನು ನೀಡಲಾಗಿದೆ. ಯಾವುದೇ ವಿದ್ಯಾರ್ಥಿಗೆ ತಾನು ಪಡೆದ ಅಂಕಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಶಾಲೆಗೆ ಲಿಖಿತ ಮನವಿ ಸಲ್ಲಿಸಿ ಆಕ್ಷೇಪಣೆಗೆ ಕಾರಣಗಳನ್ನು ನೀಡಬೇಕಿದೆ. ಫಲಿತಾಂಶ ಬದಲಾಯಿಸುವ ಅಗತ್ಯವಿದ್ದಲ್ಲಿ ಮಂಡಳಿಯು ಆಯಾ ಶಾಲೆಯ ಮುಖ್ಯಸ್ಥರಿಗೆ ಮಾಹಿತಿ ನೀಡಲಿದೆ. ಕೇವಲ ಅಂಕಗಳ ಲೆಕ್ಕದಲ್ಲುಂಟಾದ ತಪ್ಪುಗಳನ್ನು ಮಾತ್ರ ಸರಿಪಡಿಸಲು ಈ ವಿಧಾನ ಅನುಸರಿಸಬಹುದು ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೆರ್ರಿ ಅರಥೂನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News