ಪೆಗಾಸಸ್‌ ಪ್ರಕರಣ ತನಿಖೆಗೆ ಮೊದಲ ತಜ್ಞರ ಸಮಿತಿ ರಚಿಸಿದ ಪಶ್ಚಿಮ ಬಂಗಾಳ

Update: 2021-07-26 08:44 GMT

ಕೋಲ್ಕತಾ: ಪೆಗಾಸಸ್ ಫೋನ್ ಹ್ಯಾಕಿಂಗ್ ಹಗರಣದ ತನಿಖೆಗಾಗಿ ಮಮತಾ ಬ್ಯಾನರ್ಜಿ ಅವರು ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಜ್ಯೋತಿರ್ಮಯ್ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ಎಂಬಿ ಲೋಕೂರ್ ಅವರನ್ನೊಳಗೊಂಡ ಸಮಿತಿಯನ್ನು ರಚಿಸಿದ್ದಾರೆ. ಮಮತಾರ ಸೋದರಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾರ್ಜಿಯ ಹೆಸರು ಪೆಗಾಸಸ್‌ ಕಣ್ಗಾವಲಿನ ಪಟ್ಟಿಯಲ್ಲಿ ಕಾಣಿಸಿಕೊಂಡ ಬಳಿಕ ಸಿಎಂ ಈ ನಡೆ ಕೈಗೊಂಡಿದ್ದಾರೆ.

ಇದು 2017 ಮತ್ತು 2019 ರ ನಡುವೆ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ನ ಭಾರತೀಯ ʼಗ್ರಾಹಕʼ ಪೆಗಾಸಸ್ ಅನ್ನು ವಿರೋಧ ಪಕ್ಷದ ನಾಯಕರು, ಪತ್ರಕರ್ತರು, ಸರ್ಕಾರಿ ಅಧಿಕಾರಿಗಳು ಮತ್ತು ಸಾಂವಿಧಾನಿಕ ಪ್ರಾಧಿಕಾರದ ನೂರಾರು ಫೋನ್‌ಗಳನ್ನು ಹ್ಯಾಕ್ ಮಾಡಲು ಬಳಸಿದೆ ಎಂಬ ಆರೋಪದ ಮೊದಲ ಔಪಚಾರಿಕ ವಿಚಾರಣೆ ಇದಾಗಿರುವ ಕಾರಣ ಮಹತ್ವ ಪಡೆದಿದೆ.

"ಕೇಂದ್ರ ಸರಕಾರವು ವಿಚಾರಣಾ ಆಯೋಗವನ್ನು ರಚಿಸುತ್ತದೆ ಎಂದು ನಾವು ಭಾವಿಸಿದ್ದೇವೆ ಅಥವಾ ಈ ಫೋನ್-ಹ್ಯಾಕಿಂಗ್ ಘಟನೆಯನ್ನು ಪರಿಶೀಲಿಸಲು ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಗೆ ಆದೇಶಿಸಲಾಗುವುದು ಅಂದುಕೊಂಡಿದ್ದೆವು. ಆದರೆ ಕೇಂದ್ರವು ಸುಮ್ಮನೆ ಕುಳಿತಿದೆ. ಆದ್ದರಿಂದ ನಾವು 'ವಿಚಾರಣಾ ಆಯೋಗವನ್ನು' ರಚಿಸಲು ನಿರ್ಧರಿಸಿದ್ದೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ಸಣ್ಣ ಹೆಜ್ಜೆ ಇತರರನ್ನು ಎಚ್ಚರಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಆದಷ್ಟು ಬೇಗ ಪ್ರಾರಂಭವಾಗಬೇಕೆಂದು ನಾವು ಬಯಸುತ್ತೇವೆ. ಬಂಗಾಳದ ಅನೇಕ ಜನರನ್ನು ಈ ಸುಳಿಯಲ್ಲಿ ಸಿಕ್ಕಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News