ಟೋಕಿಯೊ ಒಲಿಂಪಿಕ್ಸ್: ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕ್ವಾರ್ಟರ್‌ ಫೈನಲ್‌ಗೆ

Update: 2021-07-27 08:23 GMT
photo: twitter

ಟೋಕಿಯೊ: ಮಹಿಳಾ ವೆಲ್ಟರ್ ವೇಟ್ (69 ಕೆಜಿ)ಬಾಕ್ಸಿಂಗ್  ಸ್ಪರ್ಧೆಯಲ್ಲಿ ಮಂಗಳವಾರ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಜರ್ಮನಿಯ ನಾಡಿನ್ ಅಪೆಟ್ಜ್ ಅವರನ್ನುಮಣಿಸಿ  ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಸುತ್ತಿಗೆ ತಲುಪಿದರು.

ಮೊದಲ ಬಾರಿ ಒಲಿಂಪಿಕ್ಸ್ ನಲ್ಲಿ ಕಾಣಿಸಿಕೊಂಡಿರುವ ಲವ್ಲಿನಾ ಜರ್ಮನಿಯ ಹಿರಿಯ ಬಾಕ್ಸರ್ ವಿರುದ್ಧ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ 3-2 ಅಂತರದಿಂದ ರೋಚಕವಾಗಿ ಜಯ ಸಾಧಿಸಿದರು.

ಲವ್ಲಿನಾ 9 ಬಾಕ್ಸರ್ ಗಳನ್ನು ಒಳಗೊಂಡ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿದ ಮೊದಲ ಬಾಕ್ಸರ್ ಎನಿಸಿಕೊಂಡರು. 35ರ ಹರೆಯದ ನಾಡಿಯಾ ಮೊದಲ ಬಾರಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು.

ಲವ್ಲಿನಾ ಜುಲೈ 30 ರಂದು ಚೀನಾ ತೈಪೆಯ ನಾಲ್ಕನೇ ಶ್ರೇಯಾಂಕಿತ ಮತ್ತು ಮಾಜಿ ವಿಶ್ವ ಚಾಂಪಿಯನ್ ನೀನ್-ಚಿನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದರೆ ಲವ್ಲಿನಾ ಕನಿಷ್ಠ ಕಂಚಿನ ಪದಕವನ್ನು ದೃಢಪಡಿಸಲಿದ್ದಾರೆ. ಚೆನ್ ಅವರು 2019 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದರು ಹಾಗೂ  ಪ್ರಿ-ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಇಟಲಿಯ ಏಂಜೆಲಾ ಕ್ಯಾರಿನಿಯನ್ನು 3-2ರಿಂದ ಸೋಲಿಸಿದರು.

ವಿಶ್ವ ಹಾಗೂ ಏಶ್ಯನ್ ಚಾಂಪಿಯನ್ ಶಿಪ್ ನಲ್ಲಿ ಎರಡು ಬಾರಿ ಕಂಚು ಜಯಿಸಿರುವ ಅಸ್ಸಾಂ ಬಾಕ್ಸರ್ ಲವ್ಲಿನಾ ಪದಕ ಖಚಿತಪಡಿಸಿಕೊಳ್ಳುವುದರಿಂದ ಒಂದು ಹೆಜ್ಜೆ ಹಿಂದಿದ್ದಾರೆ.

ಎಲವೆನಿಲ್ ವಲರಿವನ್ / ದಿವ್ಯಾನ್ಶ್ ಸಿಂಗ್ ಪನ್ವಾರ್ ಹಾಗೂ  ಅಂಜುಮ್ ಮೌದ್ಗಿಲ್ / ದೀಪಕ್ ಕುಮಾರ್ ಜೋಡಿ ಅರ್ಹತಾ ಹಂತ 2 ಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲರಾದ ಕಾರಣ ಭಾರತೀಯ ಶೂಟರ್‌ಗಳು ಮತ್ತೊಮ್ಮೆ ನಿರಾಶೆಗೊಳಿಸಿದ್ದಾರೆ.

ಪುರುಷರ ಸಿಂಗಲ್ಸ್ ಟೇಬಲ್ ಟೆನಿಸ್ ನ ಮೂರನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಮಾ ಲಾಂಗ್ ವಿರುದ್ಧ 4-1 ಗೋಲುಗಳಿಂದ ಪರಾಭವಗೊಂಡಿದ್ದರಿಂದ ಭಾರತದ ಶರತ್ ಕಮಲ್ ಸತತ ಮೂರು ಪಂದ್ಯಗಳನ್ನು ಕಳೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News