ದೇಶದಲ್ಲಿ ಈ ವರ್ಷ 23.28 ಲಕ್ಷಕ್ಕೆ ಕುಸಿದ ಇಂಜಿನಿಯರಿಂಗ್ ಸೀಟುಗಳ ಸಂಖ್ಯೆ

Update: 2021-07-28 10:05 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ದೇಶದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಲಭ್ಯ ಸೀಟುಗಳ ಸಂಖ್ಯೆ ಈ ವರ್ಷ ಕಳೆದೊಂದು ದಶಕದ ಅವಧಿಯಲ್ಲಿಯೇ ಕನಿಷ್ಠ ಮಟ್ಟಕ್ಕೆ ತಲುಪಿದೆ.

ದೇಶದಲ್ಲಿ ಲಭ್ಯ ಇಂಜಿನಿಯರಿಂಗ್ ಪದವಿ, ಸ್ನಾತ್ತಕೋತ್ತರ ಮತ್ತು ಡಿಪ್ಲೋಮಾ  ಸೀಟುಗಳ ಸಂಖ್ಯೆ ಈ ವರ್ಷ 23.28 ಲಕ್ಷಕ್ಕೆ ಇಳಿದಿದ್ದು ಇದು ಕಳೆದ 10 ವರ್ಷಗಳಲ್ಲಿಯೇ ಲಭ್ಯ ಕನಿಷ್ಠ ಸೀಟುಗಳಾಗಿವೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಲೇಟೆಸ್ಟ್ ಅಂಕಿಅಂಶಗಳು ತಿಳಿಸುತ್ತವೆ.

ಈ ವರ್ಷ  ಹಲವು ಇಂಜಿನಿಯರಿಂಗ್ ಕಾಲೇಜುಗಳ  ಮುಚ್ಚುಗಡೆ ಹಾಗೂ ಇನ್ನು ಕೆಲ ಕಾಲೇಜುಗಳಲ್ಲಿ ಸೀಟು ಸಾಮಥ್ರ್ಯದಲ್ಲಿ ಇಳಿಕೆಯಿಂದ ಒಟ್ಟು 1.46 ಲಕ್ಷದಷ್ಟು ಸೀಟುಗಳು ಕಡಿಮೆಯಾಗಿವೆ. ದೇಶದಲ್ಲಿ ತಾಂತ್ರಿಕ ಶಿಕ್ಷಣದ ಪೈಕಿ ಇಂಜಿನಿಯರಿಂಗ್ ಸೀಟುಗಳು ಶೇ 80ರಷ್ಟು ಪಾಲು ಹೊಂದಿವೆ.

ಶೈಕ್ಷಣಿಕ ವರ್ಷ 2014-15ರಲ್ಲಿ ದೇಶದಲ್ಲಿ ಎಐಸಿಟಿಇ ಅನುಮೋದಿತ ಸಂಸ್ಥೆಗಳಲ್ಲಿ ಗರಿಷ್ಠ 32 ಲಕ್ಷ ಸೀಟುಗಳು ಲಭ್ಯವಿತ್ತು. ಆದರೆ ನಂತರದ ವರ್ಷಗಳಲ್ಲಿ ಇಂಜಿನಿಯರಿಂಗ್ ಸೀಟುಗಳಿಗೆ ಬೇಡಿಕೆ ತಗ್ಗಿದ್ದು ಇಲ್ಲಿಯ ತನಕ ಸುಮಾರು 400 ಇಂಜಿನಿಯರಿಂಗ್ ಕಾಲೇಜುಗಳು ಮುಚ್ಚಿವೆ. ಕಳೆದ ವರ್ಷ ಹೊರತುಪಡಿಸಿ 2015-16ರಿಂದ ಪ್ರತಿ ವರ್ಷ ಸುಮಾರು 50 ಕಾಲೇಜುಗಳು ಮುಚ್ಚಿದ್ದರೆ ಈ ವರ್ಷ 63 ಕಾಲೇಜುಗಳು ಮುಚ್ಚುಗಡೆಗೆ ಅನುಮತಿ ಪಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News