ಕೇರಳದಲ್ಲಿ ಸಂಪೂರ್ಣ ವಾರಾಂತ್ಯದ ಲಾಕ್‌ಡೌನ್

Update: 2021-07-29 12:18 GMT
ಸಾಂದರ್ಭಿಕ ಚಿತ್ರ

 ಕೊಚ್ಚಿ: ದೈನಂದಿನ ಕೋವಿಡ್-19 ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆಗೆ ಸಾಕ್ಷಿಯಾಗಿರುವ ಕೇರಳವು ಈ ವಾರದಿಂದ ವಾರಾಂತ್ಯದ ಲಾಕ್‌ಡೌನ್ ಅನ್ನು ಇನ್ನಷ್ಟು ವಿಸ್ತರಿಸಿದೆ.

ಕೇಂದ್ರ ಸರಕಾರವು ಆರು ಸದಸ್ಯರ ತಂಡವನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದಿಂದ ರಾಜ್ಯಕ್ಕೆ ಕಳುಹಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

"ಕೇರಳದಲ್ಲಿ ಈಗಲೂ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದ ನಿರಂತರ ಪ್ರಯತ್ನಗಳಿಗೆ ತಂಡವು ನೆರವಾಗಲಿದೆ" ಎಂದು ಮಾಂಡವಿಯಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರ ಎನ್‌ಸಿಡಿಸಿ ನಿರ್ದೇಶಕರ ನೇತೃತ್ವದಲ್ಲಿ 6 ಸದಸ್ಯರ ತಂಡವನ್ನು ಕೇರಳಕ್ಕೆ ಕಳುಹಿಸುತ್ತಿದೆ.

ಈ ಹಿಂದೆ ಕೋವಿಡ್ ನಿರ್ವಹಣೆಯಲ್ಲಿ ಪ್ರಶಂಸಿಸಲ್ಪಟ್ಟಿದ್ದ ಕೇರಳ ರಾಜ್ಯವು ಈಗ ದೇಶದಲ್ಲಿ ಪ್ರತಿದಿನ ಸುಮಾರು 40 ಪ್ರತಿಶತದಷ್ಟು ಪಾಸಿಟಿವ್  ಪ್ರಕರಣಗಳಿಗೆ ಕೊಡುಗೆ ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News