ಶಿಲ್ಪಾ ಶೆಟ್ಟಿ ವಿರುದ್ಧ ಮಾನಹಾನಿ ವರದಿಗಳನ್ನು ತೆಗೆಯುವಂತೆ ಕೆಲ ಮಾಧ್ಯಮಗಳಿಗೆ ಆದೇಶಿಸಿದ ಬಾಂಬೆ ಹೈಕೋರ್ಟ್

Update: 2021-07-30 12:24 GMT

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಮಾನಹಾನಿಗೈಯ್ಯುವ ಉದ್ದೇಶದ ಕೆಲ ವೀಡಿಯೋಗಳನ್ನು ಕೆಲ ಮಾಧ್ಯಮಗಳು ಹಾಗೂ ಸುದ್ದಿ ವಾಹಿನಿಗಳಿಂದ  ತೆಗೆದು ಹಾಕುವಂತೆ ಬಾಂಬೆ ಹೈಕೋರ್ಟ್ ಇಂದು ಆದೇಶಿಸಿದೆ.

ತಮ್ಮ ಪತಿ ರಾಜ್ ಕುಂದ್ರಾ ಅವರು ಅಶ್ಲೀಲ ಚಿತ್ರ ತಯಾರಿ ಪ್ರಕರಣದಲ್ಲಿ ಬಂಧಿತರಾಗಿರುವುದರಿಂದ ತಮ್ಮ ವಿರುದ್ಧ ಮಾನಹಾನಿಕರ ವರದಿ ಪ್ರಕಟಿಸದಂತೆ ಹಾಗೂ ವರದಿ ಪ್ರಕಟಿಸುವವರಿಂದ ರೂ. 25 ಕೋಟಿ ಮಾನನಷ್ಟ ಪರಿಹಾರವೊದಗಿಸಬೇಕೆಂದು ಕೋರಿ ಶಿಲ್ಪಾ ಅವರು ಹೈಕೋರ್ಟಿಗೆ ಅಪೀಲು ಸಲ್ಲಿಸಿದ್ದರು.

ಆದರೆ  ತನ್ನ ಆದೇಶವನ್ನು ಮಾಧ್ಯಮಗಳ ಬಾಯ್ಮುಚ್ಚಿಸುವ ಕ್ರಮವೆಂದು ತಿಳಿಯಬಾರದೆಂದು ಹೈಕೋರ್ಟ್ ಹೇಳಿದೆ. "ಮಾಧ್ಯಮ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕಿನ ನಡುವಿನ ರೇಖೆಯನ್ನು ಸಮತೋಲದಲ್ಲಿರಿಸಬೇಕಿದೆ" ಎಂದು ನ್ಯಾಯಾಲಯು ತನ್ನ ಆದೇಶದಲ್ಲಿ ಹೇಳಿದೆ.

ಶಿಲ್ಪಾ ಶೆಟ್ಟಿ ತಮ್ಮ ಅಪೀಲಿನಲ್ಲಿ ಸುಮಾರು 29 ಮಂದಿ ಹಾಗೂ ಮಾಧ್ಯಮಗಳ ಹೆಸರುಗಳನ್ನು ಉಲ್ಲೇಖಿಸಿದ್ದರೂ ತಡೆಯಾಜ್ಞೆಯನ್ನು ಉತ್ತರ ಪ್ರದೇಶದ ಸುದ್ದಿ ವಾಹಿನಿ ಕ್ಯಾಪಿಟಲ್ ಟಿವಿ,  ಶಿಲ್ಪಾ ಅವರ ಸ್ನೇಹಿತೆ ಎಂದು ಹೇಳಿಕೊಳ್ಳುತ್ತಿರುವ ಹೀನಾ ಕುಮಾವತ್ ಹಾಗೂ ಯುಟ್ಯೂಬ್ ಚಾನೆಲ್ ಶುದ್ಧ್ ಮನೋರಂಜನ್ ವಿರುದ್ಧ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News