ಪಾನ್ ಮಸಾಲ ಕಂಪೆನಿಗಳ ಮೇಲೆ ಐಟಿ ದಾಳಿ, 400 ಕೋಟಿ.ರೂ. ಲೆಕ್ಕವಿಲ್ಲದ ವಹಿವಾಟು ಪತ್ತೆ

Update: 2021-07-30 14:20 GMT
photo: The indian express

ಹೊಸದಿಲ್ಲಿ: ಉತ್ತರ ಭಾರತ ಮೂಲದ 'ಪಾನ್ ಮಸಾಲಾ' ಉತ್ಪಾದನಾ ಗುಂಪಿನ ಮೇಲೆ ದಾಳಿ ನಡೆಸಿದ ನಂತರ 400 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಲೆಕ್ಕವಿಲ್ಲದ ವಹಿವಾಟನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಶುಕ್ರವಾರ ತಿಳಿಸಿದೆ.

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾಗಿಯಾಗಿರುವ ಈ ಗುಂಪಿನ ಕಾನ್ಪುರ, ದಿಲ್ಲಿ, ನೋಯ್ಡಾ, ಗಾಝಿಯಾಬಾದ್ ಹಾಗೂ ಕೋಲ್ಕತ್ತಾದಲ್ಲಿರುವ ಕಂಪೆನಿಯ  31 ಆವರಣಗಳ ಮೇಲೆ ಗುರುವಾರ ಶೋಧ ನಡೆಸಲಾಗಿದೆ ಎಂದು ಅದು ಹೇಳಿದೆ.

"ಪ್ರಾಥಮಿಕ ಅಂಕಿಅಂಶಗಳು 400 ಕೋಟಿ ರೂ.ಗಿಂತ ಹೆಚ್ಚಿನ ಲೆಕ್ಕವಿಲ್ಲದ ವಹಿವಾಟುಗಳನ್ನು ಸೂಚಿಸುತ್ತವೆ" ಎಂದು ಸಿಬಿಡಿಟಿ ಹೇಳಿಕೆಯಲ್ಲಿ  ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News