ಮೇಘಾಲಯ: ಚಿಕನ್, ಮಟನ್‍ಗಿಂತ ಹೆಚ್ಚು ಬೀಫ್ ತಿನ್ನಿ ಎಂದ ಬಿಜೆಪಿ ಸಚಿವ!

Update: 2021-07-31 09:17 GMT
ಸನ್ಬೋರ್ ಶುಲ್ಲೈ (Photo| Twitter/ @pramodj406)

ಶಿಲ್ಲಾಂಗ್ : ಚಿಕನ್, ಮಟನ್ ಹಾಗೂ ಮೀನಿಗಿಂತ ಹೆಚ್ಚಾಗಿ ರಾಜ್ಯದ ಜನರು ಬೀಫ್ ತಿನ್ನಬೇಕೆಂದು ಹೇಳಿ ಮೇಘಾಲಯದ ಬಿಜೆಪಿ ಸರಕಾರದಲ್ಲಿ ಸಚಿವರಾಗಿರುವ ಸನ್ಬೋರ್ ಶುಲ್ಲೈ ಹೇಳಿದ್ದಾರೆ.

ಕಳೆದ ವಾರವಷ್ಟೇ ಸಂಪುಟಕ್ಕೆ ಸೇರ್ಪಡೆಗೊಂಡ ಹಾಗೂ ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಖಾತೆಯ ಜವಾಬ್ದಾರಿ ಹೊತ್ತಿರುವ ಈ ಹಿರಿಯ ನಾಯಕನ ಹೇಳಿಕೆ ಸಾಕಷ್ಟು ಚರ್ಚೆಗೀಡಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರಿಗೂ ತಮಗಿಷ್ಟವಾದುದನ್ನು ತಿನ್ನುವ ಸ್ವಾತಂತ್ರ್ಯವಿದೆ ಎಂದೂ ಅವರು ಹೇಳಿದ್ದಾರೆ.

"ಚಿಕನ್, ಮಟನ್ ಅಥವಾ ಮೀನಿಗಿಂತ ಜನರು ಹೆಚ್ಚು ಬೀಫ್ ತಿನ್ನಲು ನಾನು ಪ್ರೋತ್ಸಾಹಿಸುತ್ತೇನೆ. ಹೀಗೆ ಮಾಡುವುದರಿಂದ, ಬಿಜೆಪಿ ಸರಕಾರ ಗೋಹತ್ಯೆಯ ಮೇಲೆ ನಿಷೇಧ ಹೇರಲಿದೆ ಎಂಬ ಭಾವನೆ ದೂರವಾಗಲಿದೆ,'' ಎಂದು ಶುಕ್ರವಾರ ಸುದ್ದಿಗಾರರ ಜತೆ ಮಾತನಾಡುತ್ತಾ ಅವರು ಹೇಳಿದ್ದಾರೆ.

ನೆರೆಯ ಅಸ್ಸಾಂ ರಾಜ್ಯದಲ್ಲಿ ಹೊಸ ಗೋ ಕಾಯಿದೆ ಜಾರಿಯಾಗಿರುವುದರಿಂದ ಅಲ್ಲಿಂದ ಮೇಘಾಲಯಕ್ಕೆ ಗೋಸಾಗಾಟ ಬಾಧಿತವಾಗದಂತೆ ನೋಡಿಕೊಳ್ಳಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರಿಗೆ ಪತ್ರ ಬರೆಯುವುದಾಗಿಯೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News