ಇ-ರುಪಿ ಡಿಜಿಟಲ್ ವೋಚರ್ ಪಾವತಿ ವ್ಯವಸ್ಥೆಗೆ ಪ್ರಧಾನಿ ಚಾಲನೆ

Update: 2021-08-02 16:55 GMT
photo : PTI

ಹೊಸದಿಲ್ಲಿ,ಆ.2:ಶಿಶು ಹಾಗೂ ತಾಯಂದಿರ ಕಲ್ಯಾಣ ಕಾರ್ಯಕ್ರಮಗಳಡಿ ಔಷಧಿ ಹಾಗೂ ಆಹಾರ ಪೂರೈಕೆ, ಕ್ಷಯ ನಿರ್ಮೂಲನೆ ಯೋಜನೆ, ಆಯುಷ್ಮಾನ್ ಭಾರತ್ ಮತ್ತು ರಸಗೊಬ್ಬರ ಸಬ್ಸಿಡಿ ಪೂರೈಕೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಹಣ ವರ್ಗಾವಣೆಗೆ ವಿನೂತನ ಇ-ರುಪಿ ಡಿಜಿಟಲ್ ವೋಚರ್ ಪಾವತಿ ವ್ಯವಸ್ಥೆಯನ್ನು ಬಳಸಲು ಕೇಂದ್ರ ಸರಕಾರ ಚಿಂತಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

 ಅವರು ಸೋಮವಾರ ಹೊಸದಿಲ್ಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇ-ರುಪಿ ಡಿಜಿಟಲ್ ವೋಚರ್ ಪಾವತಿ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಕೇವಲ ಸರಕಾರ ಮಾತ್ರವಲ್ಲದೆ, ಇತರ ಯಾವುದೇ ಸಂಘಟನೆಗಳು ಫಲಾನುಭವಿಗಳ ಚಿಕಿತ್ಸೆಗೆ, ಶಿಕ್ಷಣಕ್ಕೆ ಅಥವಾ ಇನ್ನಾವುದೇ ವಿಷಯಗಳಿಗಾಗಿ ನಗದು ರೂಪದ ಬದಲು ಇ-ರುಪಿ ಮೂಲಕ ಆರ್ಥಿಕ ನೆರವನ್ನು ನೀಡಬಹುದಾಗಿದೆ. ಇದರಿಂದಾಗಿ ಫಲಾನುಭವಿಗೆ ನೀಡಲಾದ ಹಣವು, ಯಾವ ಉದ್ದೇಶಕ್ಕೆ ನೀಡಲಾಗಿತ್ತೋ ಅದಕ್ಕಾಗಿ ಬಳಕೆಯಾಗವುದು ಖಾತರಿಯಾಗಲಿದೆ ಎಂದವರು ಹೇಳಿದ್ದಾರೆ.

ಇ-ರುಪಿ ಡಿಜಿಟಲ್ ಪಾವತಿ ಬಳಸುವ ಬ್ಯಾಂಕ್ ಗಳು:

ಪ್ರಸಕ್ತ ಖಾಸಗಿ ಹಾಗೂ ಸಾರ್ವಜನಿಕರಂಗ ಸೇರಿದಂತೆ ಒಟ್ಟು 11 ಬ್ಯಾಂಕ್ಗಎಳು ನೂತನ ಇ-ರುಪಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಇ-ರುಪಿ ವ್ಯವಸ್ಥೆಯನ್ನು ಜಾರಿಗೊಳಿಸಿವೆ.

ಕೆನರಾ ಬ್ಯಾಂಕ್, ಇನ್ಸುಇಂಡ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಹಾಗೂ .ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇ-ರುಪಿ ಕೂಪನ್ಗಳನ್ನು ಮಾತ್ರ ನೀಡಬಲ್ಲವು. ಆದರೆ ಅವುಗಳನ್ನು ನಗದೀಕರಿಸಲಾರವು.

  ‘‘ ಉತ್ತಮ ಆಡಳಿತದ ದೂರದರ್ಶಿತ್ವವವನ್ನು ಇಇಲೆಕ್ಟ್ರಾನಿಕ್ ವೋಚರ್ಗಳು ಮುನ್ನಡೆಸಲಿವೆ. ಕಲ್ಯಾಣ ಸೇವೆಗಳನ್ನು ಸೋರಿಕೆರಹಿತವಾಗಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಇದು ಕ್ರಾಂತಿಕಾರಿ ಉಪಕ್ರಮವಾಗಲಿದೆ’’ ಎಂದು ಕೇಂದ್ರ ಸರಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News