ಪ್ರತಿಪಕ್ಷ ನಾಯಕರೊಂದಿಗೆ ಸಭೆ ನಡೆಸಿದ ರಾಹುಲ್ ಗಾಂಧಿ

Update: 2021-08-03 05:29 GMT

ಹೊಸದಿಲ್ಲಿ: ಪೆಗಾಸಸ್ ಗೂಢಚರ್ಯೆ ಪ್ರಕರಣ, ಕೊರೋನ ರೋಗ ನಿರ್ವಹಣೆ ಹಾಗೂ ರೈತರ ಆಂದೋಲನ ಸೇರಿದಂತೆ ಹಲವು ವಿಚಾರಗಳ ಕುರಿತಾಗಿ ಸಂಸತ್ತಿನಲ್ಲಿ ಕೋಲಾಹಲ ಹಾಗೂ ಪ್ರತಿಭಟನೆಗಳನ್ನು ನಡೆಸುತ್ತಿರುವ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಳಿಗ್ಗೆ  ಉಭಯ ಸದನಗಳ  ಪ್ರತಿಪಕ್ಷ ನಾಯಕರನ್ನು ಬೆಳಗ್ಗಿನ ಉಪಹಾರಕ್ಕೆ ಆಹ್ವಾನಿಸಿ  ಸಭೆಯ ನೇತೃತ್ವವಹಿಸಿದರು. ಈ ವಾರ ಎರಡನೇ ಬಾರಿ ರಾಹುಲ್ ಸಭೆ ನಡೆಸಿದ್ದಾರೆ.

ಸಂಸತ್ತಿನ ಆವರಣದ ಹೊರಗೆ "ಅಣಕು ಸಂಸತ್ತು" ನಡೆಸುವ ಆಯ್ಕೆಯ ಕುರಿತು ಪ್ರತಿಪಕ್ಷಗಳು ಪ್ರಸ್ತಾವ ಮುಂದಿಟ್ಟಿವೆ.

ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ, ಎನ್‌ಸಿಪಿಯ ಸುಪ್ರಿಯಾ ಸುಳೆ ಹಾಗೂ ಶಿವಸೇನೆಯ ಸಂಜಯ್ ರಾವತ್ ಸೇರಿದಂತೆ 17 ರಾಜಕೀಯ ಪಕ್ಷಗಳ ನಾಯಕರು ಸರಕಾರದ ವಿರುದ್ಧ ಒಗ್ಗೂಡಿದ್ದಾರೆ.

"ಇಂಧನ ಬೆಲೆ ಏರಿಕೆಯ ವಿಷಯದ ಬಗ್ಗೆ ಗಮನ ಸೆಳೆಯುವ ಒಂದು ವಿಧಾನವೆಂದರೆ ಸಂಸತ್ತಿಗೆ ಸೈಕಲ್ ಸವಾರಿ  ಮಾಡುವುದು. ಭಾರತದ ಜನರು ಕಷ್ಟಪಡುತ್ತಿದ್ದಾರೆ ..." ಎಂದು ರಾಹುಲ್  ಗಾಂಧಿ ಸಭೆಯಲ್ಲಿ ಹೇಳಿದರು. ಹೀಗಾಗಿ ರಾಹುಲ್ ಇಂದು ಬೆಳಗ್ಗೆಯೇ ಸಂಸತ್ತಿಗೆ ಸೈಕಲ್ ನಲ್ಲಿ ತೆರಳುವ ಸಾಧ್ಯತೆಯಿದೆ.

ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೋಮವಾರ ಮಧ್ಯಾಹ್ನ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರೆ ಮಾಡಿ ಸುಗಮ ಕಲಾಪಕ್ಕೆ ಬೆಂಬಲ ಕೋರಿದರು ಎಂದು ಮೂಲಗಳು ತಿಳಿಸಿವೆ. ಸಂಸತ್ತಿನಲ್ಲಿ ಚರ್ಚೆಗೆ ಸರಕಾರ ಅವಕಾಶ ನೀಡಬೇಕು ಎಂದು ಖರ್ಗೆ ಅವರು ಸಿಂಗ್ ಗೆ ತಿಳಿಸಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News