ಒಲಿಂಪಿಕ್ಸ್‌: ಜಾವೆಲಿನ್ ಥ್ರೋ ನಲ್ಲಿ ಫೈನಲ್‌ಗೆ ಅರ್ಹತೆ ಪಡೆದ ನೀರಜ್ ಛೋಪ್ರಾ

Update: 2021-08-04 03:57 GMT
Photo credit: Twitter@Neeraj_chopra1

ಟೋಕಿಯೊ, ಆ.4: ಒಲಿಂಪಿಕ್ಸ್‌ನಲ್ಲಿ ಪದಕ ನಿರೀಕ್ಷೆ ಮೂಡಿಸಿರುವ ಭಾರತದ ಅಥ್ಲೀಟ್ ನೀರಜ್ ಛೋಪ್ರಾ ತಮ್ಮ ಪ್ರಥಮ ಯತ್ನದಲ್ಲೇ 86.65 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಎ ಗುಂಪಿನ ಅಗ್ರಸ್ಥಾನಿಯಾಗಿ ಫೈನಲ್‌ಗೆ ಅರ್ಹತೆ ಪಡೆದರು.

ಭಾರತದ ಮತ್ತೊಬ್ಬ ಸ್ಪರ್ಧಿ, ವಿಶ್ವದ 8ನೇ ಕ್ರಮಾಂಕದ ಜಾವೆಲಿನ್ ಪಟು ಶಿವಪಾಲ್ ಸಿಂಗ್ 76.40 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯಲು ಮಾತ್ರ ಸಾಧ್ಯವಾಯಿತು. 

ಮೊದಲ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಛೋಪ್ರಾ ಅರ್ಹತಾ ಅಂತರವಾದ 83.5 ಮೀಟರ್ ಗುರಿಯನ್ನು ಮೀರಿ ಮೊದಲ ಎಸೆತದಲ್ಲೇ ಅದ್ಭುತ ಪ್ರದರ್ಶನ ತೋರಿದರು. ಇದೇ ಗುಂಪಿನಲ್ಲಿರುವ ಜರ್ಮನಿಯ ವೆಟ್ಟರ್ ಮತ್ತು ಫಿನ್ಲೆಂಡ್‌ನ ಲಸ್ಸಿ ಕೂಡಾ ಫೈನಲ್‌ಗೆ ಅರ್ಹತೆ ಸಂಪಾದಿಸಿದರು. ವಿಶ್ವದ ನಂಬರ್ ವನ್ ಜಾವೆಲಿನ್ ಪಟು ವೆಟ್ಟರ್ ತಮ್ಮ ಮೂರನೇ ಹಾಗೂ ಅಂತಿಮ ಯತ್ನದಲ್ಲಿ 85.64 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಎರಡನೆಯವರಾಗಿ ಫೈನಲ್ ಪ್ರವೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News