ಹಡಗು ಅಪಹರಣ ಪ್ರಕರಣ ಮುಕ್ತಾಯ: ಬ್ರಿಟನ್

Update: 2021-08-04 15:27 GMT

‌ಲಂಡನ್, ಆ. 4: ಒಮಾನ್ ಕೊಲ್ಲಿಯಲ್ಲಿ ನಡೆದಿದೆಯೆನ್ನಲಾದ ಹಡಗಿನ ಅಪಹರಣ ಕೊನೆಗೊಂಡಿದೆ ಹಾಗೂ ಹಡಗು ಈಗ ಸುರಕ್ಷಿತವಾಗಿದೆ ಎಂದು ಬ್ರಿಟನ್ ನ ಸಾಗರ ರಕ್ಷಣಾ ಸಂಸ್ಥೆಯಾಗಿರುವ ಯುನೈಟೆಡ್ ಕಿಂಗ್ಡಮ್ ಮೇರಿಟೈಮ್ ಟ್ರೇಡ್ ಆಪರೇಶನ್ಸ್ ಬುಧವಾರ ಹೇಳಿದೆ.

‘‘ಹಡಗಿನಲ್ಲಿದ್ದವರು ಅದರಿಂದ ಇಳಿದಿದ್ದಾರೆ. ಹಡಗು ಸುರಕ್ಷಿತವಾಗಿದೆ. ಪ್ರಕರಣ ಮುಕ್ತಾಯಗೊಂಡಿದೆ’’ ಎಂದು ಅದು ಟ್ವೀಟ್ ಮಾಡಿದೆ.

ಹಡಗಿನ ಅಪಹರಣಕ್ಕೆ ಕೆಲವು ದಿನಗಳ ಮೊದಲು ಟ್ಯಾಂಕರೊಂದರ ಮೇಲೆ ದಾಳಿ ನಡೆದಿತ್ತು. ಹಾಗೂ ಆ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ದಾಳಿಯನ್ನು ಇರಾನ್ ನಡೆಸಿದೆ ಎಂಬುದಾಗಿ ಅಮೆರಿಕ ಆರೋಪಿಸಿತ್ತು.

ಫುಜೈರಾದಿಂದ ಪೂರ್ವಕ್ಕೆ 60 ಮೈಲಿ ದೂರದಲ್ಲಿ ಹಡಗೊಂದು ಹೋರ್ಮುಝ್ ಜಲಸಂಧಿಯತ್ತ ಹೋಗುತ್ತಿದೆ ಹಾಗೂ ಅದು ಅಪಹರಣಕ್ಕೊಳಗಾಗಿರಬಹುದು ಎಂದು ಯುನೈಟೆಡ್ ಕಿಂಗ್ಡಮ್ ಮೇರಿಟೈಮ್ ಟ್ರೇಡ್ ಆಪರೇಶನ್ಸ್ ಮಂಗಳವಾರ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News