ಎನ್ಎಚ್ಎಐ ಅಧ್ಯಕ್ಷರ ಸೋಗು ಹಾಕಿ ವಂಚನೆ: ವ್ಯಕ್ತಿಯ ಬಂಧನ

Update: 2021-08-06 17:24 GMT

ಹೊಸದಿಲ್ಲಿ, ಆ. 6: ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾದ ಅಧ್ಯಕ್ಷನೆಂದು ಸೋಗು ಹಾಕಿ 80 ಲಕ್ಷ ರೂಪಾಯಿ ವಂಚಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ‌

ವ್ಯಕ್ತಿಯೋರ್ವರಿಗೆ 80 ಲಕ್ಷ ರೂಪಾಯಿ ವಂಚಿಸಿದ ಆರೋಪದಲ್ಲಿ ಬಿಹಾರದ ಮಧುಬನಿ ನಿವಾಸಿ ಮನೋಜ್ ಕುಮಾರ್ ಝಾನನ್ನು ಗುರುಗ್ರಾಮದಿಂದ ಸಿಬಿಐ ಬಂಧಿಸಿದೆ ಎಂದು ಅವರು ತಿಳಿಸಿದ್ದಾರೆ. ಝಾನ ಬಂಧನದ ಹಿನ್ನೆಲೆಯಲ್ಲಿ ಸಿಬಿಐ ದಿಲ್ಲಿ, ಕೋಲ್ಕತಾ, ಮಧುಬನಿ ಹಾಗೂ ಬೊಕಾರೊ ಸ್ಟೀಲ್ ಸಿಟಿಯ 8 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಇಲ್ಲಿ ಹಲವು ದಾಖಲೆಗಳು, ಸುಮಾರು 200 ಸಿಮ್ ಕಾರ್ಡ್ ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News