ಆಡಳಿತವು ಗೋವುಗಳಿಗೆ ತೋರುವ ಕಾಳಜಿಯನ್ನು ಮಹಿಳೆ, ಮಕ್ಕಳಿಗೂ ತೋರುತ್ತಿದೆಯೇ?: ಗುಜರಾತ್‌ ಹೈಕೋರ್ಟ್‌ ಪ್ರಶ್ನೆ

Update: 2021-08-08 13:33 GMT

ಹೊಸದಿಲ್ಲಿ: ಜಾನುವಾರುಗಳ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ 1985 ರ ಗುಜರಾತ್ ಸಾಮಾಜಿಕ ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ (PASA) ಅಡಿಯಲ್ಲಿ ಗಿರ್-ಸೋಮನಾಥ ನಿವಾಸಿಯನ್ನು ಬಂಧಿಸಿರುವುದನ್ನು ಪ್ರಶ್ನಿಸಿ, "ಪ್ರಾಣಿ ಹಿಂಸೆಯನ್ನು ಕೊನೆಗೊಳಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ ತೋರಿರುವ ಕಾಳಜಿಯನ್ನು ಮಹಿಳೆ ಮತ್ತು ಮಕ್ಕಳ ಆರೈಕೆ ಕುರಿತಾದಂತೆಯೂ ಅವರ ಆಡಳಿತವು ಕಾಳಜಿ ತೋರುತ್ತಿದೆಯೇ?" ಎಂದು ಗುಜರಾತ್‌ ಹೈಕೋರ್ಟ್‌ ಪ್ರಶ್ನಿಸಿದೆ.

ಗೋವಂಶದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿರುವ ಆಡಳಿತದ ಕ್ರಮವನ್ನು ಪ್ರಶಂಸಿಸುತ್ತಿದ್ದೇವೆ. ಆದರೆ ಪ್ರಾಣಿಗಳಿಗೆ ತೋರಲಾಗುತ್ತಿರುವ ಇದೇ ಕಾಳಜಿಯನ್ನು ಮಕ್ಕಳಿಗೂ ತೋರಲಾಗುತ್ತಿದೆಯೇ? ಅವರ ವ್ಯಾಪ್ತಿಯಲ್ಲಿ ಮಹಿಳೆಯರು, ಮಕ್ಕಳೂ ಇದ್ದಾರೆ." ಎಂದು ನ್ಯಾಯಮೂರ್ತಿ ಪರೇಶ್‌ ಉಪಾಧ್ಯಾಯ ಹೇಳಿದ್ದಾರೆ. ಆಗಸ್ಟ್‌ 13ರ ಒಳಗಡೆ ಈ ಪ್ರಶ್ನೆಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.

ಪ್ರಾಣಿ ಹಿಂಸೆ (ತಡೆ) ಕಾಯ್ದೆಯಡಿ ತನ್ನ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿರುವುದನ್ನು ಪ್ರಶ್ನಿಸಿ ಅಸ್ಫಾಕ್‌ ಪಂಜಾ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುವ ವೇಳೆ ನ್ಯಾಯಾಧೀಶರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News