×
Ad

ರಾಜ್ಯಸಭೆಯಲ್ಲಿ ವಿಪಕ್ಷಗಳ ಕೃತ್ಯ ಖಂಡಿಸುವ ವೇಳೆ ಭಾವಪರವಶರಾದ ಸಭಾಪತಿ ವೆಂಕಯ್ಯ ನಾಯ್ಡು

Update: 2021-08-11 13:52 IST

ಹೊಸದಿಲ್ಲಿ : ವಿಪಕ್ಷಗಳು 'ಪ್ರಜಾಪ್ರಭುತ್ವದ ದೇವಾಲಯ'ದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆಂದು ಹೇಳಿ ಅದನ್ನು ಖಂಡಿಸುವ ಹೇಳಿಕೆಯನ್ನು ಓದುವ ಸಂದರ್ಭ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಇಂದು ಭಾವುಕರಾದ ಘಟನೆ ನಡೆದಿದೆ.

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಗಳ ಚರ್ಚೆಯ ವೇಳೆ ವಿಪಕ್ಷ ಸದಸ್ಯರು ಮಂಗಳವಾರ ಸದನದ ಮಧ್ಯಭಾಗದಲ್ಲಿದ್ದ ಅಧಿಕಾರಿಗಳ ಮೇಜನ್ನೇರಿ, ಕರಿಪತಾಕೆಗಳನ್ನು ಪ್ರದರ್ಶಿಸಿ, ಫೈಲ್‍ಗಳನ್ನು ಕಿತ್ತೆಸೆದು, ಮೇಜುಗಳ ಮೇಲೆ ಗಂಟೆಗಳ ಕಾಲ ಕುಳಿತುಕೊಂಡು ಹಾಗೂ ನಿಂತುಕೊಂಡು ಇದ್ದ ಘಟನೆಯ ಹಿನ್ನೆಲೆಯಲ್ಲಿ ಇಂದು ಅದನ್ನು ಸಭಾಪತಿ ಖಂಡಿಸುವ ಹೇಳಿಕೆ ಓದಿದ್ದರು.

ಸಂಸತ್ತನ್ನು ಪ್ರಜಾಪ್ರಭುತ್ವದ ದೇವಾಲಯ ಹಾಗೂ ಅದರ ಕೇಂದ್ರ ಸ್ಥಾನವನ್ನು ಗರ್ಭಗುಡಿ ಎಂದು ವಿವರಿಸಿದ ಅವರು "ನಿನ್ನೆ ಸಂಸತ್ತಿನ ಪಾವಿತ್ರ್ಯಕ್ಕೆ ಧಕ್ಕೆ ತಂದ ರೀತಿ ನೋಡಿ ನನಗೆ ಬಹಳ ನೋವಾಗಿದೆ, ನನ್ನ ಆಕ್ರೋಶ ಹೊರಹಾಕಲು ಹಾಗೂ ಖಂಡಿಸಲು ಪದಗಳು ದೊರಕುತ್ತಿಲ್ಲ, ಕಳೆದ ರಾತ್ರಿ ನಾನು ನಿದ್ದೆಯಿಲ್ಲದೆ ಕಳೆದಿದ್ದೇನೆ" ಎಂದು ಹೇಳುತ್ತಲೇ ಅವರು ಭಾವಪರವಶರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News