ರಾಜ್ಯಸಭೆಯಲ್ಲೂ ಒಬಿಸಿ ಮಸೂದೆಗೆ ಅಂಗೀಕಾರ

Update: 2021-08-11 13:56 GMT

ಹೊಸದಿಲ್ಲಿ: ಸಾಮಾನ್ಯವಾಗಿ ಒಬಿಸಿ ಮಸೂದೆ ಎಂದು ಕರೆಯಲಾಗುವ ಸಂವಿಧಾನ (ನೂರ ಇಪ್ಪತ್ತೇಳನೇ ತಿದ್ದುಪಡಿ) ಮಸೂದೆ 2021 ಅನ್ನು ರಾಜ್ಯಸಭೆಯು ಬುಧವಾರ ಸರ್ವಾನುಮತದಿಂದ ಅಂಗೀಕರಿಸಿದೆ.

ಈ ಮಸೂದೆಯು ರಾಜ್ಯಗಳು ಹಾಗೂ  ಕೇಂದ್ರಾಡಳಿತ ಪ್ರದೇಶಗಳು  ತಮ್ಮ ಸ್ವಂತ ಒಬಿಸಿ ಪಟ್ಟಿಗಳನ್ನು ಮಾಡುವ ಅಧಿಕಾರವನ್ನು ಪುನಃಸ್ಥಾಪಿಸಲು ಪ್ರಸ್ತಾಪಿಸುತ್ತದೆ.

ಈ ಮಸೂದೆಯು ಮಂಗಳವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News