×
Ad

ನೂತನ ಐಟಿ ನಿಯಮ ಪರಿಚಯಿಸುವ ಅಗತ್ಯ ಏನು?: ಕೇಂದ್ರ ಸರಕಾರವನ್ನು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

Update: 2021-08-13 22:30 IST

ಮುಂಬೈ, ಆ. 13: 2009ರಲ್ಲಿ ಜಾರಿಗೆ ಬಂದಿರುವ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ರದ್ದುಪಡಿಸದೆ, ಅಧಿಸೂಚಿತ ಮಾಹಿತಿ ತಂತ್ರಜ್ಞಾನ (ಐಟಿ)ನಿಯಮಗಳನ್ನು ಪರಿಚಯಿಸುವ ಅಗತ್ಯವೇನು? ಎಂದು ಬಾಂಬೆ ಉಚ್ಚ ನ್ಯಾಯಾಲಯ ಶುಕ್ರವಾರ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ. 

ನೂತನ ಕಾಯ್ದೆಯ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡುವಂತೆ ಕೋರಿ ಸಲ್ಲಿಸಲಾದ ಎರಡು ಮನವಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಹಾಗೂ ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ಅವರನ್ನೊಳಗೊಂಡ ಪೀಠ ತನ್ನ ಆದೇಶವನ್ನು ಕಾಯ್ದಿರಿಸಿತು. 

ಡಿಜಿಟಲ್ ಲೀಗಲ್ ನ್ಯೂಸ್ ಪೋರ್ಟಲ್ ಲೀಫ್ಲೆಟ್ ಹಾಗೂ ಪತ್ರಕರ್ತ ನಿಖಿಲ್ ವಾಗ್ಲೆ ಸಲ್ಲಿಸಿದ ಮನವಿ ಹೊಸ ನಿಯಮಗಳಲ್ಲಿರುವ ಹಲವು ನಿಬಂಧನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಇದು ಸಂವಿಧಾನ ನೀಡಿದ ಪ್ರಜೆಗಳ ಮುಕ್ತ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕುಗಳ ಮೇಲೆ ತಣ್ಣಗಿನ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ‘ದಿ ವೈರ್’ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು ಹಾಗೂ ಮಾಧ್ಯಮ ವೇದಿಕೆಗಳು ಈ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪ್ರಶ್ನಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News