ಸಾಮಾಜಿಕ ತಾಣದಲ್ಲಿ ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಉ.ಪ್ರ. ಪೊಲೀಸರಿಂದ ಚೆನ್ನೈಯ ವೃದ್ಧನ ಬಂಧನ

Update: 2021-08-16 17:01 GMT

ಚೆನ್ನೈ, ಆ. 16: ಸಾಮಾಜಿಕ ಜಾಲ ತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಚೆನ್ನೈನ 60 ವರ್ಷದ ವೃದ್ಧರೋರ್ವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. 

ಪ್ರಧಾನಿ ವಿರುದ್ಧ ಅಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಜೌನ್ಪುರ ನಗರದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ತಂಡವೊಂದು ಚೆನ್ನೈಗೆ ಆಗಮಿಸಿ ಆರೋಪಿ ಮನಮೋಹನ್ ಮಿಶ್ರಾನನ್ನು ಆತನ ಮನೆಯಿಂದ ಶುಕ್ರವಾರ ಬಂಧಿಸಿತು. 

ಆರೋಪಿಯನ್ನು ಟ್ರಾನ್ಸಿಟ್ ಡಿಮಾಂಡ್ನಲ್ಲಿ ಜೌನ್ಪುರಕ್ಕೆ ಕರೆತರಲಾಗುತ್ತಿದೆ ಎಂದು ನಗರ (ಜೌನ್ಪುರ)ದ ಸರ್ಕಲ್ ಇನ್ಸ್ಪೆಕ್ಟರ್ ಜಿತೇಂದ್ರ ಕುಮಾರ್ ದುಬೆ ಅವರು ತಿಳಿಸಿದ್ದಾರೆ. ಮನಮೋಹನ್ ಮಿಶ್ರಾನ ವಿರುದ್ಧ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News