ಅಲಿಗಢವನ್ನು ಹರಿಗಡ ಎಂದು ಮರುನಾಮಕರಣ:ಉತ್ತರಪ್ರದೇಶ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ ಪಂಚಾಯತ್

Update: 2021-08-17 13:30 GMT

ಹೊಸದಿಲ್ಲಿ: ಉತ್ತರ ಪ್ರದೇಶದ ಅಲಿಗಡವನ್ನು ಹರಿಗಡ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯತ್ ಸೋಮವಾರದ ಸಭೆಯಲ್ಲಿ ಅನುಮೋದಿಸಿದೆ ಎಂದು ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ಇಂದು ತಿಳಿಸಿದ್ದಾರೆ. ಆದಿತ್ಯನಾಥ್ ಸರಕಾರಕ್ಕೆ ಈ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ.

ಅಲಿಗಡದ ಮರುನಾಮಕರಣದ ಕ್ರಮವನ್ನು ಉತ್ತರಪ್ರದೇಶ ಸರಕಾರವು ಅನುಮತಿಸಿದರೆ, ಇದು ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಮರುನಾಮಕರಣಗೊಂಡ ಸ್ಥಳಗಳ ಒಂದು ದೊಡ್ಡ ಪಟ್ಟಿಯನ್ನು ಸೇರುತ್ತದೆ. 2019 ರ ಜನವರಿಯಲ್ಲಿ ಕುಂಭ ಮೇಳ ಕ್ಕಿಂತ ಮೊದಲು ಅಲಹಾಬಾದ್‌ ನಗರವನ್ನು  ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಲಾಗಿತ್ತು.

"ನಾವು ನಿನ್ನೆ (ಸೋಮವಾರ) ಜಿಲ್ಲಾ ಪಂಚಾಯತ್ ಮಂಡಳಿಯ ಸಭೆ ನಡೆಸಿದ್ದೇವೆ. ಸಭೆಯಲ್ಲಿ ಕೆಲವು ಪ್ರಸ್ತಾಪಗಳನ್ನು ಅಂಗೀಕರಿಸಲಾಯಿತು. ಅಲಿಗಡವನ್ನು ಹರಿಗಡ್ ಎಂದು ಮರುನಾಮಕರಣ ಮಾಡುವುದು ಮೊದಲ ಪ್ರಸ್ತಾವನೆ ಆಗಿತ್ತು. ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಾವು ಅದನ್ನು ಮುಖ್ಯಮಂತ್ರಿಗೆ ಕಳುಹಿಸಿದ್ದೇವೆ. ಇದನ್ನು ಅನುಮೋದಿಸಲಾಗುವುದು ಎಂದು ಆಶಿಸುತ್ತೇವೆ "ಎಂದು ಅಲಿಗಡ ಜಿಲ್ಲಾ ಪಂಚಾಯತ್ ಮುಖ್ಯಸ್ಥ ವಿಜಯ್ ಸಿಂಗ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News