×
Ad

ಜಮ್ಮು-ಕಾಶ್ಮೀರ: ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆಗೈದ ಭಯೋತ್ಪಾದಕರು

Update: 2021-08-17 18:23 IST
photo: twitter

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿ ಮಂಗಳವಾರ ಬಿಜೆಪಿ ನಾಯಕನನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಇದು ಒಂದು ವಾರದಲ್ಲಿ ನಡೆದ ಎರಡನೇ ಘಟನೆಯಾಗಿದೆ  ಮೃತ ಜಾವಿದ್ ಅಹ್ಮದ್ ದಾರ್ ಅವರು ಜಿಲ್ಲೆಯಲ್ಲಿ ಬಿಜೆಪಿಯ ಕ್ಷೇತ್ರ ಉಸ್ತುವಾರಿಯಾಗಿದ್ದರು.

ಆಗಸ್ಟ್ 9 ರಂದು ಜಮ್ಮು ಹಾಗೂ  ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಬಿಜೆಪಿಯ ಕಿಸಾನ್ ಮೋರ್ಚಾದ ಜಿಲ್ಲಾ ಮುಖ್ಯಸ್ಥರಾಗಿದ್ದ ಗುಲಾಂ ರಸೂಲ್ ದಾರ್ ಹಾಗೂ  ಅವರ ಪತ್ನಿಯನ್ನು ಅನಂತನಾಗ್ ನಲ್ಲಿ ಭಯೋತ್ಪಾದಕರು ಹತ್ಯೆಗೈದಿದ್ದರು.

ಜಾವಿದ್ ಅಹ್ಮದ್ ದಾರ್ ಹತ್ಯೆಯನ್ನು "ಬರ್ಬರ" ಕೃತ್ಯ ಎಂದು ಬಿಜೆಪಿ ಕರೆದಿದೆ. ಈ ಪ್ರದೇಶದ ಎಲ್ಲ ರಾಜಕೀಯ ಪಕ್ಷಗಳು ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿವೆ.

"ನಮ್ಮ ಕಾರ್ಯಕರ್ತರ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ. ಈ ದೇಶವಿರೋಧಿಗಳು ತಮ್ಮ ತಪ್ಪು ಕೆಲಸಗಳಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ" ಎಂದು ಬಿಜೆಪಿಯ ಅಶೋಕ್ ಕೌಲ್ ಹೇಳಿದರು.

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಈ ಹತ್ಯೆಯನ್ನು ಖಂಡಿಸಿದರು ಹಾಗೂ  "ಅಂತಹ ಹಿಂಸಾಚಾರಗಳಿಗೆ ಯಾವುದೇ ಸ್ಥಳವಿಲ್ಲ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News