ರಾಹುಲ್ ಗಾಂಧಿ ವಿರುದ್ಧ ಕ್ರಮ ಪ್ರತಿಭಟಿಸಿ ಕಾಂಗ್ರೆಸಿಗರಿಂದ ‘ಟ್ವಿಟರ್ ಹಕ್ಕಿ’ಯ ಫ್ರೈ

Update: 2021-08-17 15:22 GMT
photo : twitter video screengrab

ಹೊಸದಿಲ್ಲಿ,ಆ.17: ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಟ್ವಿಟರ್ ಕೈಗೊಂಡಿದ್ದ ದಂಡನಾ ಕ್ರಮಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ವಿಶಿಷ್ಟ ಪ್ರತಿಭಟನೆಯಲ್ಲಿ ಆಂಧ್ರಪ್ರದೇಶ ಕಾಂಗ್ರೆಸ್ ಕಾರ್ಯಕರ್ತರು ‘ಟ್ವಿಟರ್ ಹಕ್ಕಿ’ಯನ್ನು ಕರಿದು ಅದನ್ನು ದಿಲ್ಲಿ ಮತ್ತು ಗುರುಗ್ರಾಮಗಳಲ್ಲಿರುವ ಟ್ವಿಟರ್ ಕಚೇರಿಗಳಿಗೆ ಕೊರಿಯರ್ ಮೂಲಕ ರವಾನಿಸಿದ್ದಾರೆ.

ಇತ್ತೀಚಿಗೆ ದಿಲ್ಲಿಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಅಪ್ರಾಪ್ತ ವಯಸ್ಕ ದಲಿತ ಬಾಲಕಿಯ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದ ರಾಹುಲ್ ಆ ಚಿತ್ರಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದು ತನ್ನ ನಿಯಮಗಳನ್ನು ಉಲ್ಲಂಘಿಸಿದೆಯೆಂದು ಆರೋಪಿಸಿ ಟ್ವಿಟರ್ ಅವರ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ಇದೀಗ ಕಾಂಗ್ರೆಸ್ ಕಾರ್ಯಕರ್ತರು ‘ಟ್ವಿಟರ್ ಹಕ್ಕಿ ’ಯನ್ನು ಸ್ಟವ್ ಮೇಲೆ ಕರಿಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
 
‘ಟ್ವಿಟರ್,ನೀನು ರಾಹುಲ್ ಗಾಂಧಿಯವರ ಖಾತೆಯನ್ನು ಸ್ಥಗಿತಗೊಳಿಸಿ ಮತ್ತು ನಮ್ಮ ಟ್ವೀಟ್ಗಳನ್ನು ಪ್ರೋತ್ಸಾಹಿಸದೆ ತಪ್ಪು ಮಾಡಿರುವೆ. ಆದ್ದರಿಂದ ನಾವಿದನ್ನು ಹುರಿದು ಟ್ವಿಟರ್ ಕಚೇರಿಗಳಿಗೆ ರವಾನಿಸುತ್ತಿದ್ದೇವೆ ’ಎಂದು ಹಕ್ಕಿಯನ್ನು ಕರಿಯುತ್ತಿದ್ದ ವ್ಯಕ್ತಿ ವೀಡಿಯೊದಲ್ಲಿ ಹೇಳಿದ್ದಾನೆ. ’ಟ್ವಿಟರ್,ನಿನಗೆ ಈ ಭಕ್ಷ್ಯ ಇಷ್ಟವಾಗಬಹುದು’ ಎಂದೂ ಆತ ಸೇರಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News