ಕಾಬೂಲ್ ನಲ್ಲಿ ಸಿಲುಕಿದ ಕೇರಳಿಗರ ವಾಪಸಾತಿಗೆ ತುರ್ತು ಕ್ರಮಕ್ಕೆ ಕೇರಳ ಮುಖ್ಯಮಂತ್ರಿ ಆಗ್ರಹ

Update: 2021-08-17 16:40 GMT

ತಿರುವನಂತಪುರ, ಆ. 17: ತಾಲಿಬಾನ್ ಉಗ್ರರು ಅಫ್ಘಾನಿಸ್ಥಾನದಲ್ಲಿ ಅಧಿಕಾರ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಕಾಬೂಲ್ ನಲ್ಲಿ ಸಿಲುಕಿರುವ ಮಲಯಾಳಿಗಳ ವಾಪಾಸಾತಿಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ. 

ಮುಖ್ಯಮಂತ್ರಿ ಅವರ ನಿರ್ದೇಶನದಂತೆ ರಾಜ್ಯ ಸರಕಾರದ ಅನಿವಾಸಿ ಕೇರಳಿಗರ ಕಲ್ಯಾಣ ಸಂಸ್ಥೆ ನೋರ್ಕಾ ರೂಟ್ಸ್ ಈ ವಿಷಯಕ್ಕೆ ಸಂಬಂಧಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. 

ಕಾಬೂಲ್ ನಲ್ಲಿ ಸಿಲುಕಿಕೊಂಡ 36ಕ್ಕೂ ಅಧಿಕ ಮಲಯಾಳಿಗಳು ಇದುವರೆಗೆ ನೋರ್ಕಾದ ನೆರವು ಕೋರಿದ್ದಾರೆ ಎಂದು ಅದು ತಿಳಿಸಿದೆ. ಕಾಬೂಲ್ ನಲ್ಲಿ ಸಿಲುಕಿದ ಮಲೆಯಾಳಿಗಳನ್ನು ಸಂಪರ್ಕಿಸಿರುವ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಕೃಷ್ಣ ನಂಬೂದಿರಿ ಕೆ., ಅಫ್ಘಾನಿಸ್ಥಾನದ ರಾಜಧಾನಿಯಲ್ಲಿ ಸಿಲುಕಿರುವ ಇತರ ಕೇರಳಿಗರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News