ಲಸಿಕೀಕರಣ:‌ ಕೇರಳದ ವಯನಾಡ್ ಜಿಲ್ಲೆಯ ಸಾಧನೆ

Update: 2021-08-17 17:41 GMT

ತಿರುವನಂತಪುರಂ, ಆ.17: ಕೇರಳದ ವಯನಾಡ್ ಜಿಲ್ಲೆ ಉದ್ದೇಶಿತ ಅರ್ಹ ಜನರಿಗೆ ಬಹುತೇಕ ಸಂಪೂರ್ಣ ಲಸಿಕೀಕರಣ ಕಾರ್ಯ ನಡೆಸಿದ ದೇಶದ ಪ್ರಥಮ ಜಿಲ್ಲೆ ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದು ಜಿಲ್ಲಾಡಳಿತದ ಹೇಳಿಕೆ ತಿಳಿಸಿದೆ.

ವಯನಾಡ್ ಜಿಲ್ಲೆಯಲ್ಲಿ ಲಸಿಕೆ ಪಡೆಯಲು 6,51,967 ಜನರನ್ನು ಗುರುತಿಸಲಾಗಿದ್ದು ಇವರಲ್ಲಿ ರವಿವಾರ ಸಂಜೆಯವರೆಗೆ 6,15,729 ಜನರಿಗೆ ಲಸಿಕೆ ನೀಡಲಾಗಿದೆ. ಇನ್ನೂ 36,238 ಮಂದಿಗೆ ಲಸಿಕೆ ನೀಡಲು ಬಾಕಿಯಿದ್ದು ಇವರಲ್ಲಿ 24,529 ಮಂದಿ ಕಳೆದ 3 ತಿಂಗಳಲ್ಲಿ ಕೋವಿಡ್ ಪಾಸಿಟಿವ್ ವರದಿ ಬಂದವರಾದ್ದರಿಂದ ಲಸಿಕೆ ಪಡೆಯುವಂತಿಲ್ಲ. 1,243 ಮಂದಿ ಲಸಿಕೆ ಪಡೆಯಲು ಒಪ್ಪಿಲ್ಲ. ಉಳಿದವರು ಕ್ವಾರಂಟೈನ್ನಲ್ಲಿದ್ದಾರೆ ಅಥವಾ ವೈದ್ಯರ ಸಲಹೆಯ ಮೇರೆಗೆ ಲಸಿಕೆ ಪಡೆದಿಲ್ಲ ಎಂದು ಹೇಳಿಕೆ ತಿಳಿಸಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News