ಹವಾಮಾನ ಬದಲಾವಣೆಯಿಂದ ಭಾರತದಲ್ಲಿ ಮಕ್ಕಳಿಗೆ ಹೆಚ್ಚು ಅಪಾಯ: ಯುನಿಸೆಫ್ ವರದಿ

Update: 2021-08-21 13:07 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಹವಾಮಾನ ಬದಲಾವಣೆಯಿಂದ ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಭದ್ರತೆಗೆ ಹೆಚ್ಚಿನ ಅಪಾಯವಿರುವ ನಾಲ್ಕು ದಕ್ಷಿಣ ಏಷ್ಯಾ ದೇಶಗಳ ಪೈಕಿ ಭಾರತವೂ ಸೇರಿದೆ ಎಂದು ಯುನಿಸೆಫ್‍ನ ಹೊಸ ವರದಿಯೊಂದು ತಿಳಿಸಿದೆ.

"ದಿ ಕ್ಲೈಮೇಟ್ ಕ್ರೈಸಿಸ್ ಈಸ್ ಎ ಚೈಲ್ಡ್ ರೈಟ್ಸ್ ಕ್ರೈಸಿಸ್: ಇಂಟ್ರೊಡ್ಯೂಸಿಂಗ್ ದಿ ಚಿಲ್ಡ್ರನ್ಸ್ ಕ್ಲೈಮೇಟ್ ರಿಸ್ಕ್ ಇಂಡೆಕ್ಸ್" ಎಂಬ ಈ ವರದಿ ಮಕ್ಕಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಚಂಡಮಾರುತ, ವಿಪರೀತ ಏರಿಕೆಯಾಗುವ ತಾಪಮಾನ ಮುಂತಾದ ಪ್ರಾಕೃತಿಕ ವಿಕೋಪಗಳು ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರುವುದು ಎಂಬ ಆಧಾರದಲ್ಲಿ ಈ ವರದಿಯ ದೇಶಗಳನ್ನು ಪಟ್ಟಿ ಮಾಡಿದೆ.

ಹವಾಮಾನ ಬದಲಾವಣೆಯಿಂದ ಗರಿಷ್ಠ ಅಪಾಯವೆರಿಸುವ ದಕ್ಷಿಣ ಏಷ್ಯಾ ದೇಶಗಳಲ್ಲಿ ಭಾರತ ಹೊರತುಪಡಿಸಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ಇವೆ. ಈ ಪಟ್ಟಿಯಲ್ಲಿ ಭಾರತ 23ನೇ ಸ್ಥಾನದಲ್ಲಿದ್ದರೆ ಪಾಕಿಸ್ತಾನ 14ನೇ ಸ್ಥಾನ, ಬಾಂಗ್ಲಾದೇಶ 15ನೇ ಸ್ಥಾನ ಮತ್ತು ಅಫ್ಗಾನಿಸ್ತಾನ 25ನೇ ಸ್ಥಾನದಲ್ಲಿದೆ.

ಪ್ರವಾಹ ಮತ್ತು ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆಯೂ ಭಾರತದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹೆಚ್ಚು ಅಪಾಯವಿದೆ ಎಂದು ಹೈ ರಿಸ್ಕ್ ವಿಭಾಗದಲ್ಲಿರುವ 33 ದೇಶಗಳಲ್ಲಿ ಭಾರತವನ್ನೂ ಈ ವರದಿಯಲ್ಲಿ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News