ತಮಿಳುನಾಡು:ಸೋಮವಾರದಿಂದ ಚಿತ್ರಮಂದಿರಗಳು,ಮುಂದಿನ ತಿಂಗಳು ಶಾಲೆ ತೆರೆಯಲು ಅನುಮತಿ
Update: 2021-08-21 19:17 IST
ಚೆನ್ನೈ: ಕೋವಿಡ್ ನಿರ್ಬಂಧಗಳನ್ನು ಶ್ರೇಣೀಕೃತ ರೀತಿಯಲ್ಲಿ ಸರಾಗಗೊಳಿಸುವ ತನ್ನ ಕಾರ್ಯತಂತ್ರವನ್ನು ಮುಂದುವರಿಸುತ್ತಾ ತಮಿಳುನಾಡು ಸರಕಾರವು ಶನಿವಾರ ನಿರ್ಬಂಧಗಳಲ್ಲಿ ಮತ್ತಷ್ಟು ಸಡಿಲಿಕೆಗಳನ್ನು ಘೋಷಿಸಿದೆ.
ಮುಖ್ಯಮಂತ್ರಿ ಎಂ. ಕೆ .ಸ್ಟಾಲಿನ್ ಘೋಷಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, ರಾಜ್ಯದಲ್ಲಿ ನಿರ್ಬಂಧಗಳನ್ನು ಸೆಪ್ಟೆಂಬರ್ 9 ರವರೆಗೆ ವಿಸ್ತರಿಸಲಾಗಿದೆ.
ಹೊಸ ಸಡಿಲಿಕೆಗಳ ಅಡಿಯಲ್ಲಿ ಚಿತ್ರಮಂದಿರಗಳಿಗೆ ಸೋಮವಾರದಿಂದ ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ತೆರೆಯಲು ಅನುಮತಿ ನೀಡಲಾಗಿದೆ. ಕೋವಿಡ್ ಎಸ್‌ಒಪಿಗೆ ಅನುಸಾರವಾಗಿ ಸೆಪ್ಟೆಂಬರ್ 1 ರಿಂದ 9ರ ಬಳಿಕದ ತರಗತಿಗಳನ್ನು ಪುನರಾರಂಭಿಸಲು ಶಾಲೆಗಳು ಅನುಮೋದನೆ ಪಡೆದಿವೆ.