ಕೆಜಿಎಫ್ - 2 ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ

Update: 2021-08-22 12:50 GMT

ಬೆಂಗಳೂರು: ನಟ ಯಶ್ ಅಭಿನಯದ ಬಹು ನಿರೀಕ್ಷಿತ ಸಿನೆಮಾ ಕೆಜಿಎಫ್ ಭಾಗ-2 ಬಿಡುಗಡೆಗೆ ಕೊನೆಗೂ ದಿನಾಂಕ ಘೋಷಣೆಯಾಗಿದ್ದು, 2022 ಏಪ್ರಿಲ್ 14ರಂದು ಬಿಡುಗಡೆಗೊಳಿಸಲು ಚಿತ್ರ ತಂಡ ನಿರ್ಧರಿಸಿದೆ. 

ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಟ ಯಶ್, ದಿನಾಂಕವನ್ನು ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ. 

ಪ್ರಶಾಂತ್ ನೀಲ್ ನಿರ್ದೇಶನದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಕೆಜಿಎಫ್ -2 ಚಿತ್ರ ಬಿಡುಗಡೆಗೆ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದು, ಇದೀಗ ಚಿತ್ರ ತಂಡ ಕೊನೆಗೂ ದಿನಾಂಕ ಘೋಷಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News