ಧಾರ್ಮಿಕ ಮೂಲಭೂತವಾದ ಹೇಗೆ ರಾಷ್ಟ್ರಗಳನ್ನು ಸುಡುತ್ತದೆ ಎನ್ನುವುದಕ್ಕೆ ಅಫ್ಘಾನಿಸ್ತಾನವು ಪಾಠವಾಗಿದೆ:‌ಪಿಣರಾಯಿ ವಿಜಯನ್

Update: 2021-08-23 16:15 GMT

ತಿರುವನಂತಪುರ, ಆ.23: ಧಾರ್ಮಿಕ ಮೂಲಭೂತವಾದದ ಹೆಸರಿನಲ್ಲಿ ಕೋಮು ಅಸಾಮರಸ್ಯವು ಜನರನ್ನು ಮತ್ತು ದೇಶಗಳನ್ನು ಸುಡುತ್ತದೆ ಎನ್ನುವುದಕ್ಕೆ ಅಫ್ಘಾನಿಸ್ತಾನವು ಮಾನವ ಜನಾಂಗಕ್ಕೊಂದು ಪಾಠವಾಗಿದೆ,ಹೀಗಾಗಿ ನಾವು ಜಾತಿ ಮತ್ತು ಧರ್ಮಕ್ಕಿಂತ ಮಿಗಿಲಾಗಿ ಮಾನವತೆಯನ್ನು ಎತ್ತಿಹಿಡಿಯಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೋಮವಾರ ಹೇಳಿದರು.

ಧಾರ್ಮಿಕ ನಾಯಕ ಹಾಗೂ ಸಾಮಾಜಿಕ ಸುಧಾರಕ ಶ್ರೀನಾರಾಯಣ ಗುರು ಅವರ 167ನೇ ಜಯಂತಿ ಆಚರಣೆಯ ವರ್ಚುವಲ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು,ವಿಶ್ವದ ಹಲವು ಭಾಗಗಳಲ್ಲಿ ಜನಾಂಗಭೇದ,ಪಂಥೀಯತೆ ಹಾಗೂ ರಕ್ತಪಾತ ಹೆಚ್ಚುತ್ತಿವೆ ಮತ್ತು ಭಾರತದ ನೆರೆಯ ರಾಷ್ಟ್ರಗಳಲ್ಲೊಂದಾದ ಅಫ್ಘಾನಿಸ್ಥಾನದಲ್ಲಿ ಸ್ಥಿತಿಯು ಘೋರವಾಗಿದೆ. ಭಾರತದಲ್ಲಿಯೂ ಕೋಮುದ್ವೇಷವು ತಲೆಯನ್ನೆತ್ತಿದೆ ಮತ್ತು ಎಲ್ಲ ಮಾನವರನ್ನೂ ಒಂದೇ ಎಂದು ಭಾವಿಸಬೇಕು ಹಾಗೂ ಜಾತಿ ಅಥವಾ ಧರ್ಮದ ಆಧಾರದಲ್ಲಿ ಭೇದಭಾವ ಮಾಡಬಾರದು ಎಂಬ ಶ್ರೀನಾರಾಯಣ ಗುರುಗಳ ಸಂದೇಶವನ್ನು ಅಳವಡಿಸಿಕೊಳ್ಳುವ ಮೂಲಕ ಇವೆಲ್ಲಕ್ಕೂ ಅಂತ್ಯವನ್ನು ಹಾಡಬಹುದು ಎಂದರು.


ಫೆಲಿಸ್ತೀನ್ನಲ್ಲಿ,ರೊಹಿಂಗ್ಯಾ ನಿರಾಶ್ರಿತರ ವಿಷಯದಲ್ಲಿ ಮತ್ತು ಕಾಶ್ಮೀರದಲ್ಲಿ ಸಂಭವಿಸುತ್ತಿರುವ ವಿದ್ಯಮಾನಗಳೆಲ್ಲ ವಿಭಜಕ ಧಾರ್ಮಿಕ ಮೂಲಭೂತವಾದಕ್ಕೆ ನಿದರ್ಶನಗಳಾಗಿವೆ ಎಂದು ಪಿಣರಾಯಿ ಬೆಟ್ಟುಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News