×
Ad

ಹೊಸ ದಾಖಲೆ: ಒಂದೇ ದಿನದಲ್ಲಿ 1 ಕೋಟಿಗೂ ಅಧಿಕ ಮಂದಿಗೆ ಲಸಿಕೆ

Update: 2021-08-27 23:08 IST

ಹೊಸದಿಲ್ಲಿ,ಆ.27: ರಾಷ್ಟ್ರವ್ಯಾಪಿ ಲಸಿಕೀಕರಣ ಅಭಿಯಾನದ ಅಂಗವಾಗಿ ಭಾರತವು ಶುಕ್ರವಾರ 1,00,64,032 ಕೋವಿಡ್19 ಲಸಿಕೆ ಡೋಸ್‌ಗಳನ್ನು ಜನರಿಗೆ ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ದೇಶದಲ್ಲಿ ಲಸಿಕೆ ಅಭಿಯಾನದ ಆರಂಭಗೊಂಡ ಆನಂತರ ಒಂದೇ ದಿನ ಗರಿಷ್ಠ ಸಂಖ್ಯೆಯ ಲಸಿಕೆ ನೀಡಿಕೆ ಇದಾಗಿದೆ. ಇದೇ ವೇಳೆ ಭಾರತವು ಶುಕ್ರವಾರ ಸಂಜೆ 7 ಗಂಟೆಯ ದೇಶದ 62 ಕೋಟಿ ಮಂದಿ (62,09,43,580)ಗೆ ಲಸಿಕೆಯನ್ನು ನೀಡುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News