ಗೋವಾ: ವಸತಿ ಸಮುಚ್ಛಯದಲ್ಲಿ ಐರಿಷ್‌ ಮಹಿಳೆಯ ಮೃತದೇಹ ಪತ್ತೆ

Update: 2021-08-31 18:00 GMT

ಪಣಜಿ, ಆ. 31: 66 ವರ್ಷದ ಐರಿಷ್ ಮಹಿಳೆಯ ಮೃತದೇಹ ಉತ್ತರ ಗೋವಾದ ಫ್ಲಾಟ್ ನಲ್ಲಿ ಮಂಗಳವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೋನ್ ಕರೆ ಹಾಗೂ ಸಂದೇಶಗಳಿಗೆ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಮಹಿಳೆಯ ಗೆಳೆಯ ಫ್ಲಾಟ್ ಗೆ ಧಾವಿಸಿ ಬಾಗಿಲು ಒಡೆದಾಗ ಮೃತದೇಹ ಪತ್ತೆಯಾಗಿದೆ. 

ಅವರು ಕೆಲವು ದಿನಗಳ ಹಿಂದೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಮಹಿಳೆಯ ಗೆಳೆಯನ ಹೇಳಿಕೆ ಆಧರಿಸಿ ಮುಂದಿನ ತನಿಖೆ ನಡೆಸಲಾಗುವುದು ಎಂದು ಉತ್ತರ ಗೋವಾದ ಪೊಲೀಸ್ ಅಧೀಕ್ಷಕ ಸೋಬಿತ್ ಸೆಕ್ಸೇನ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News