ಪೊಲೀಸರು ಒಂದಿಷ್ಟು ಬದಲಾಗಲಿ

Update: 2021-09-03 18:19 GMT

ಮಾನ್ಯರೇ,

ಇತ್ತೀಚೆಗೆ ಕೆಲವರು ಪೊಲೀಸರೊಂದಿಗೆ ಘರ್ಷಣೆಗೆ ನಿಲ್ಲುತ್ತಿರುವುದನ್ನು ನೋಡುತ್ತಿದ್ದೇವೆ. ಪೊಲೀಸರು ತಾವು ಯೂನಿಫಾರಂ ಹಾಕಿದ್ದೇವೆ ಎಂಬ ದರ್ಪದಿಂದ ಅನವಶ್ಯಕವಾಗಿ ಏಕವಚನದಿಂದ ನಿಂದಿಸಿ ಕಾರಣವಿಲ್ಲದೆ ದಂಡ ಹಾಕುವಾಗ ಜನಸಾಮಾನ್ಯರು ಪೊಲೀಸರ ಬೈಗುಳ ಕೇಳಿಯೂ, ಹಾಕುವ ದಂಡು ತೆತ್ತು ಪ್ರಶ್ನೆ ಮಾಡದೆ ಮುಂದೆ ಹೋಗುತ್ತಾರೆ. ಆದರೆ ಕಾನೂನು ಬಲ್ಲವರ ಮೇಲೂ ಈ ರೀತಿಯಾಗಿ ವರ್ತಿಸಿದರೆ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಘರ್ಷಣೆಯಾಗುವ ಸಂಭವ ಹೆಚ್ಚು. ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿನಿತ್ಯ ಅದೆಷ್ಟೋ ಘಟನೆಗಳು ನಡೆಯುತ್ತವೆ. ಈ ಹಿಂದೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಮಾನವೀಯ ಸಂಬಂಧವಿತ್ತು. ಆದರೆ ಇತ್ತೀಚೆಗೆ ಅದು ಮರೀಚಿಕೆಯಾಗಿದೆ. ಸಾರ್ವಜನಿಕರಿಂದ ಪೊಲೀಸರಿಗೆ ಸಿಗುವ ಗೌರವ, ಘನತೆ ಹೆಚ್ಚಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಇನ್ನಾದರೂ ಒಂದಿಷ್ಟು ಬದಲಾಗಬೇಕಾಗಿದೆ.

Writer - -ಯಾಖೂಬ್ ಕೊಟ್ಟೂರು

contributor

Editor - -ಯಾಖೂಬ್ ಕೊಟ್ಟೂರು

contributor

Similar News