ಇಬ್ಬರು ಆರೋಗ್ಯ ಕಾರ್ಯಕರ್ತರಲ್ಲಿ ನಿಫಾ ವೈರಸ್ ಸೋಂಕು ಲಕ್ಷಣ: ಕೇರಳ ಆರೋಗ್ಯ ಸಚಿವೆ

Update: 2021-09-05 15:23 GMT

ಹೊಸದಿಲ್ಲಿ, ಸೆ. 5: ಮತ್ತೆ ಇಬ್ಬರಲ್ಲಿ ನಿಫಾ ವೈರಸ್ ಸೋಂಕಿನ ಲಕ್ಷಣಗಳು ಕಂಡು ಬಂದವೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ರವಿವಾರ ಹೇಳಿದ್ದಾರೆ. ನಿಫಾ ವೈರಸ್ ಸೋಂಕಿಗೆ ಒಳಗಾಗಿ ಮೃತಪಟ್ಟ 12 ವರ್ಷದ ಬಾಲಕನೊಂದಿಗೆ ಸಂಪರ್ಕ ಹೊಂದಿದ್ದ ಅತ್ಯಂತ ಅಪಾಯದ ಸಾಧ್ಯತೆ ಇರುವ 20 ಮಂದಿಯಲ್ಲಿ ಇವರಿಬ್ಬರು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ. 

‘‘ನಾವು ಇದುವರೆಗೆ 188 ಸಂಪರ್ಕವನ್ನು ಗುರುತಿಸಿದ್ದೇವೆ.   ಅವರಲ್ಲಿ 20 ಮಂದಿಯನ್ನು ಅತ್ಯಧಿಕ ಅಪಾಯದ ಸಾಧ್ಯತೆಯಲ್ಲಿ  ಇರುವವರು ಎಂದು  ನಿಗಾ ತಂಡ ಗುರುತಿಸಿದೆ.  ಇವರಲ್ಲಿ ಅತ್ಯಧಿಕ ಅಪಾಯ ಸಾಧ್ಯತೆ ಇರುವ ಇಬ್ಬರಿಗೆ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಇಬ್ಬರೂ ಆರೋಗ್ಯ ಕಾರ್ಯಕರ್ತರು. ಓರ್ವ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೋರ್ವ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಿಬ್ಬಂದಿ’’ ಎಂದು ಪರಿಸ್ಥಿತಿಯ ಪರಿಶೀಲನೆ ನಡೆಸಲು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.  

ಅತ್ಯಂತ ಅಪಾಯ ಸಾಧ್ಯತೆ ಇರುವ ಎಲ್ಲ 20 ಮಂದಿಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಗಿದೆ. ಬಾಲಕನೊಂದಿಗೆ ಸಂಪರ್ಕ ನಡೆಸಿದ್ದ ಇತರರರಿಗೆ ಐಸೋಲೇಶನ್ಗೆ ಒಳಗಾಗುವಂತೆ ಸೂಚಿಸಲಾಗಿದೆ.  ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಾರ್ಡ್ ಒಂದನ್ನು ಸಂಪೂರ್ಣವಾಗಿ ನಿಫಾ ವಾರ್ಡ್ ಆಗಿ ಪರಿವರ್ತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಿಫಾ ವೈರಸ್ ಸೋಂಕಿಗೆ ಒಳಗಾಗಿದ್ದ ಬಾಲಕ ಇದು ಬೆಳಗ್ಗೆ ಮೃತಪಟ್ಟಿದ್ದ. ಬಾಲಕನ ಮಾದರಿಯನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿಕೊಡಲಾಗಿತ್ತು. ವರದಿಯಲ್ಲಿ ನಿಫಾ ವೈರಸ್ ಇರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News