ಫರೀದಾಬಾದ್: ಯುವತಿಯ ಮೃತ ದೇಹ ಪತ್ತೆ ಪ್ರಕರಣ ತನಿಖೆಗೆ ಸಿಟ್ ರೂಪಿಸುವಂತೆ ಕುಟುಂಬ ಆಗ್ರಹ

Update: 2021-09-05 16:30 GMT

ಚಂಡಿಗಡ, ಸೆ. 5: 21: ಫರೀದಾಬಾದ್ ನಲ್ಲಿ ಆಗಸ್ಟ್ 27ರಂದು 21 ವರ್ಷದ ಯುವತಿಯ ಮೃತದೇಹ ಪತ್ತೆಯಾದ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರೂಪಿಸುವಂತೆ ಯುವತಿಯ ಕುಟುಂಬ ಆಗ್ರಹಿಸಿದೆ. ನಾಗರಿಕ ರಕ್ಷಣ ಸ್ವಯಂಸೇವಕಿಯಾಗಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಹತ್ಯೆಗೈಯಲಾಗಿದೆ. ಮೃತದೇಹವನ್ನು ವಿರೂಪಗೊಳಿಸಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಅಲ್ಲದೆ, ಕುಟುಂಬದ ಸದಸ್ಯರು ದಿಲ್ಲಿಯಲ್ಲಿ ನಡೆಸುತ್ತಿದ್ದ ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ. 

ಈ ನಡುವೆ ಯುವತಿಯ ಪತಿಯೆಂದು ಹೇಳಿಕೊಂಡ ವ್ಯಕ್ತಿಯೋರ್ವ ದಿಲ್ಲಿಯ ಕಾಳಿಂದಿ ಕುಂಜ್ ಪ್ರದೇಶದ ಪೊಲೀಸ್ ಠಾಣೆಗೆ ತೆರಳಿ, ಯುವತಿಯನ್ನು ತಾನು ಹತ್ಯೆಗೈದಿರುವುದಾಗಿ ತಿಳಿಸಿದ್ದಾನೆ. ಆದರೆ, ಯುವತಿ ವಿವಾಹವಾಗಿರುವುದು ತಮಗೆ ತಿಳಿದಿಲ್ಲ ಎಂದು ಕುಟುಂಬ ಹೇಳಿದೆ. ತನ್ನ ಮಗಳ ಬಗ್ಗೆ ಆತನಿಗೆ ಕೇವಲ ಪರಿಚಯ ಮಾತ್ರ ಇತ್ತು ಎಂದು ಯುವತಿಯ ತಂದೆ ಪ್ರತಿಪಾದಿಸಿದ್ದಾರೆ. 

‘‘ಯುವತಿಯ ಗುಪ್ತಾಂಗ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಗಾಯಗಳು ಕಂಡು ಬಂದಿವೆ. ಹತ್ಯೆಗೈಯುವ ಮುನ್ನ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಇದನ್ನು ಒಬ್ಬ ವ್ಯಕ್ತಿ ಮಾಡಿದಂತೆ ಕಾಣುತ್ತಿಲ್ಲ. ಇದರ ಹಿಂದೆ ಸಂಚು ಇದೆ’’ ಎಂದು ಯುವತಿಯ ಸೋದರ ಸಂಬಂಧಿ ತಿಳಿಸಿದ್ದಾರೆ. ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿ ಉಲ್ಲೇಖಿಸಿಲ್ಲ. ಮೃತದೇಹವನ್ನು ವಿರೂಪಗೊಳಿಸಲಾಗಿದೆ. ಹರಿತವಾದ ಆಯಧದಿಂದ ಗಾಯಗೊಳಿಸಲಾಗಿದೆ. ಹಲವು ಇರಿತದ ಗಾಯಗಳಿವೆ ಎಂದು ಫರೀದಾಬಾದ್ನ ಉಪ ಪೊಲೀಸ್ ಆಯುಕ್ತ ಅಂಶು ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News