ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಸ್ಪರ್ಧಿಸುವುದಿಲ್ಲ, ಬೇರೊಬ್ಬರು ಅವರನ್ನು ಸೋಲಿಸುತ್ತಾರೆ: ಬಿಜೆಪಿ
Update: 2021-09-07 12:25 IST
ಕೋಲ್ಕತಾ: ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ ಭಬನಿಪುರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಹಾಗೂ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸುವುದಿಲ್ಲ ಎಂದು ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಸೋಮವಾರ ಹೇಳಿದ್ದಾರೆ.
ಪಕ್ಷವು ತನ್ನ ಅಭ್ಯರ್ಥಿಯನ್ನು ಇನ್ನೂ ನಿರ್ಧರಿಸಿಲ್ಲ ಎಂದು ಘೋಷ್ ಮೇದಿನೀಪುರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಭಬನಿಪುರದಿಂದ ಬೇರೆಯವರು ಸ್ಪರ್ಧಿಸುತ್ತಾರೆ. ಸುವೇಂದು ಅಧಿಕಾರಿ ಈಗಾಗಲೇ ಮಮತಾರನ್ನು ಸೋಲಿಸಿದ್ದಾರೆ. ಒಬ್ಬ ವ್ಯಕ್ತಿಯು ಅವರನ್ನು ಏಕೆ ಅನೇಕ ಬಾರಿ ಸೋಲಿಸುತ್ತಾರೆ? ಈ ಬಾರಿ ಬೇರೆಯವರು ಮಮತಾರನ್ನು ಸೋಲಿಸುತ್ತಾರೆ ”ಎಂದು ಘೋಷ್ ಹೇಳಿದರು.
ಭಬನಿಪುರದಲ್ಲಿ ಉಪಚುನಾವಣೆ ನಡೆಸುವ ಚುನಾವಣಾ ಆಯೋಗದ ಕ್ರಮದ ವಿರುದ್ಧ ಕಲ್ಕತ್ತಾ ಹೈಕೋರ್ಟ್‌ಗೆ ತೆರಳುವ ಆಯ್ಕೆಯನ್ನು ತಮ್ಮ ಪಕ್ಷವು ಪರಿಶೀಲಿಸುತ್ತಿದೆ ಹಾಗೂ ಈ ಬಗ್ಗೆ ಬಿಜೆಪಿ ಕಾನೂನು ಅಭಿಪ್ರಾಯವನ್ನು ಪಡೆಯಬಹುದು ಎಂದು ಘೋಷ್ ಹೇಳಿದರು.