ತಾಲಿಬಾನ್ ಸರಕಾರ ರಚನೆ ಹಿನ್ನೆಲೆ: ಸಿಐಎ ಮುಖ್ಯಸ್ಥರನ್ನು ಭೇಟಿಯಾದ ಅಜಿತ್ ದೋವಲ್

Update: 2021-09-08 06:53 GMT

ಹೊಸದಿಲ್ಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಂಗಳವಾರ ಅಮೆರಿಕದ ಸ್ಪೈಮಾಸ್ಟರ್ ವಿಲಿಯಂ ಬರ್ನ್ಸ್ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದರು. ಅಫ್ಘಾನಿಸ್ತಾನವನ್ನು ಮುನ್ನಡೆಸುವ ನಾಯಕರ ಹೆಸರನ್ನು ತಾಲಿಬಾನ್ ಘೋಷಿಸಿದ ದಿನದಂದು ಈ ಸಭೆ ನಡೆಯಿತು,

ದೋವಲ್ ಹಾಗೂ  ಸೆಂಟ್ರಲ್ ಇಂಟೆಲಿಜನ್ಸ್ ಏಜೆನ್ಸಿಯ (ಸಿಐಎ) ಮುಖ್ಯಸ್ಥರು ಚರ್ಚಿಸಿದ ವಿವರಗಳು ತಿಳಿದುಬಂದಿಲ್ಲ. ಆದರೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರ ರಚನೆಯಾದ ಹಿನ್ನೆಲೆಯಲ್ಲಿ, ಭದ್ರತಾ ವಿಚಾರಗಳು ಚರ್ಚೆಯಲ್ಲಿ ಹೆಚ್ಚಿನ ಆದ್ಯತೆ ಪಡೆದವು.

ಮೂರು ವಾರಗಳ ಹಿಂದೆ ತಾಲಿಬಾನ್ ಅಫ್ಘಾನ್ ರಾಜಧಾನಿಯನ್ನು ವಶಪಡಿಸಿಕೊಂಡಾಗ ಕಾಬೂಲ್ ನಿಂದ ತಮ್ಮ ರಾಯಭಾರಿ ಕಚೇರಿಯ ಸಿಬ್ಬಂದಿಯನ್ನು ಸ್ಥಳಾಂತರಿಸಿದ ದೇಶಗಳಲ್ಲಿ ಭಾರತವೂ ಸೇರಿತ್ತು. ರಷ್ಯಾ ಹಾಗೂ  ಪಾಕಿಸ್ತಾನಗಳು ಅಲ್ಲಿಯೇ ಉಳಿದುಕೊಂಡಿದ್ದವು.

ದೋವಲ್  ಅವರೊಂದಿಗಿನ ಸಿಐಎ ಮುಖ್ಯಸ್ಥರ ಭೇಟಿಯು ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಬಗ್ಗೆ ಭಾರತದ ಕಳವಳವನ್ನು ಒಳಗೊಂಡಿರುತ್ತದೆ. ಭಾರತವನ್ನು ಗುರಿಯಾಗಿಸಲು ತಾಲಿಬಾನ್ ತನ್ನ ನೆಲದಿಂದ ಭಯೋತ್ಪಾದಕ ಗುಂಪುಗಳು ಕಾರ್ಯನಿರ್ವಹಿಸಲು ಅವಕಾಶ ನೀಡುವುದಿಲ್ಲ ಎಂದು ನಿರೀಕ್ಷಿಸಲಾಗಿದೆ ಎಂದು ಭಾರತ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News