ಗೋಧಿ ಖರೀದಿ ಬೆಲೆಯನ್ನು ಶೇ 2ರಷ್ಟು ಏರಿಸಿದ ಕೇಂದ್ರ ಸರ್ಕಾರ

Update: 2021-09-08 12:58 GMT

ಹೊಸದಿಲ್ಲಿ: ರೈತರಿಂದ ಹೊಸ-ಋತುವಿನ ಗೋಧಿಯನ್ನು ತಾನು ಖರೀದಿಸುವ ಬೆಲೆಯನ್ನು ಕೇಂದ್ರ ಸರ್ಕಾರ ಶೇ 2ರಷ್ಟು ಏರಿಕೆ ಮಾಡಿದ್ದು ಇದರಿಂದಾಗಿ ಪ್ರತಿ 100 ಕೆಜಿ ಗೋಧಿಯನ್ನು ಸರ್ಕಾರ ರೂ 2,015 ತೆತ್ತು ಖರೀದಿಸಲಿದೆ.

ಸಾಸಿವೆ ಬೀಜದ ಕನಿಷ್ಠ ಬೆಂಬಲ ಬೆಲೆಯನ್ನು ಪ್ರಸಕ್ತ ವರ್ಷದ ಬೆಳೆಗೆ ರೂ 400ರಷ್ಟು ಏರಿಕೆ ಮಾಡಲಾಗಿದ್ದು ತಲಾ ಕ್ವಿಂಟಾಲ್‍ಗೆ ರೂ 5,050ರಂತೆ ಖರೀದಿಸಲಾಗುವುದು. ಕೇಂದ್ರದ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ಕಳೆದ ಹಲವಾರು ತಿಂಗಳುಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ  ಬೆಳವಣಿಗೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ  ಸಭೆಯಲ್ಲಿ ಎಂಎಸ್‍ಪಿ ಏರಿಸುವ ನಿರ್ಧಾರ ಕೈಗೊಳ್ಳಲಾಗಿದೆ. 2021-22ರ ಬೆಳೆಗೆ (ಜುಲೈ-ಜೂನ್) ಹಾಗೂ 2022-34 ಮಾರುಕಟ್ಟೆ ಋತುಗಳಿಗೆ  ಆರು ರಾಬಿ ಬೆಳೆಗಳ ಎಂಎಸ್‍ಪಿ ಏರಿಸಲಾಗಿದೆ ಎಂದು ಸಮಿತಿ  ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News