ರೈಲು ಸಂಚಾರಕ್ಕೆ ಯಾಕೆ ನಿರ್ಬಂಧ?

Update: 2021-09-09 17:34 GMT

ಮಾನ್ಯರೇ,

ಕೊರೋನ ಮೊದಲನೇ/ ಎರಡನೇ ಅಲೆಯ ಲಾಕ್‌ಡೌನ್‌ನಿಂದಾಗಿ ಕೇಂದ್ರ ಸರಕಾರ ಕೆಲವು ತಿಂಗಳುಗಳಿಂದ ಹೆಚ್ಚಿನ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇದೀಗ ದೇಶದಾದ್ಯಂತ ಕೊರೋನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ನಿಯಂತ್ರಣಕ್ಕೆ ಬಂದು, ಆರ್ಥಿಕ ಚಟುವಟಿಕೆಗಳು ಗರಿಗೆದರಿದ್ದು, ಜನಜೀವನ ಎಂದಿನಂತೆ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ದೇಶದಾದ್ಯಂತ ಪೂರ್ಣಪ್ರಮಾಣದಲ್ಲಿ ರೈಲು ಸಂಚಾರ ಇನ್ನೂ ಆರಂಭವಾಗದ ಕಾರಣ ನಿತ್ಯ ಸಾವಿರಾರು ಮಂದಿ ಪರದಾಡುತ್ತಿದ್ದಾರೆ. ಬಸ್‌ಗಿಂತ ಹೆಚ್ಚಾಗಿ ರೈಲನ್ನೇ ಅವಲಂಬಿಸಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ಆಸ್ಪತ್ರೆಗೆ, ದೂರದ ಊರುಗಳಿಗೆ ತೆರಳುವವರು ದುಬಾರಿ ಹಣ ತೆತ್ತು ಬಸ್‌ಗಳಲ್ಲಿಯೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ರಾಜ್ಯದಲ್ಲಿರುವ ಬಹುತೇಕ ಎಲ್ಲಾ ವಲಯಗಳಿಗೂ ನಿಯಮ ಸಡಿಲಿಸಿದೆ. ಆದರೆ ರೈಲು ಸೇವೆಗೆ ಮಾತ್ರ ಯಾಕೆ ಈ ನಿರ್ಬಂಧ?

ಬಸ್ಸಿಗೆ ಹೋಲಿಸಿದರೆ ರೈಲು ಪ್ರಯಾಣ ಹೆಚ್ಚು ಸುರಕ್ಷಿತ ಮತ್ತು ಅಗ್ಗದ ದರದ ಪ್ರಯಾಣಿಕರ ಸ್ನೇಹಿ. ಹೀಗಿದ್ದರೂ ರೈಲು ಸಂಚಾರಕ್ಕೆ ಯಾಕೆ ಮೀನಮೇಷ ಎಣಿಸುತ್ತಿದ್ದಾರೆ. ಬಡ ಮತ್ತು ಮಧ್ಯಮ ವರ್ಗದವರು ಹೆಚ್ಚಾಗಿ ರೈಲು ಪ್ರಯಾಣವನ್ನೇ ಅವಲಂಬಿಸಿದ್ದಾರೆ. ಕೇಂದ್ರ ಸರಕಾರ ಈಗಲಾದರೂ ಇತ್ತ ಗಮನಹರಿಸಿ ಕೋವಿಡ್ ಸೋಂಕು ಪ್ರಮಾಣ ನಿಯಂತ್ರಣ ಇರುವ ರಾಜ್ಯಗಳಲ್ಲಿಯಾದರೂ ಪ್ಯಾಸೆಂಜರ್ ರೈಲುಗಳು ಸೇರಿದಂತೆ ಸ್ಥಗಿತಗೊಂಡಿರುವ ಎಲ್ಲಾ ರೈಲುಗಳಿಗೂ ಪುನರ್ ಚಾಲನೆ ನೀಡಿ ಜನ ಸಾಮಾನ್ಯರ ಹಿತ ಕಾಯಬೇಕಿದೆ. 

Similar News