ಕೋವಿಡ್ ಟೆಸ್ಟ್ ನಲ್ಲಿ ಭಾರತೀಯ ಆಟಗಾರರು ನೆಗೆಟಿವ್, ಐದನೇ ಟೆಸ್ಟ್ ನಿಗದಿಯಂತೆ ನಡೆಯುವ ಸಾಧ್ಯತೆ

Update: 2021-09-09 17:36 GMT

ಲಂಡನ್: ಭಾರತೀಯ ಕ್ರಿಕೆಟ್ ಆಟಗಾರರು ಕೋವಿಡ್ -19 ಪರೀಕ್ಷೆಯಲ್ಲಿ ನೆಗೆಟಿವ್ ಆದ ಹಿನ್ನೆಲೆಯಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಶುಕ್ರವಾರದಿಂದ ನಿಗದಿಯಾಗಿರುವ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು NDTVಗೆ ತಿಳಿಸಿವೆ.

ಭಾರತೀಯ ಕ್ರಿಕೆಟ್‌ನ ಸಹಾಯಕ ಸಿಬ್ಬಂದಿಯೊಬ್ಬರು ಕೋವಿಡ್ -19 ಗೆ ಪಾಸಿಟಿವ್ ಆದ ಬಳಿಕ 5ನೇ  ಟೆಸ್ಟ್ ಮುನ್ನಾದಿನವಾದ ಗುರುವಾರ ಭಾರತದ ಅಭ್ಯಾಸ ರದ್ದಾಗಿತ್ತು. ಸಿಬ್ಬಂದಿಗೆ ಕೊರೋನ ಕಾಣಿಸಿಕೊಂಡ ಬಳಿಕ ಆಟಗಾರರು ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಗಾದರು. ಅವರನ್ನು ಹೋಟೆಲ್‌ನಲ್ಲಿ ಉಳಿಯುವಂತೆ ಕೇಳಲಾಯಿತು.

 ಐದನೇ ಟೆಸ್ಟ್‌ನ ಭವಿಷ್ಯದ ಬಗ್ಗೆ ಸಂದೇಹವಿತ್ತು. ಆದರೆ ಇದೀಗ ಭಾರತೀಯ ಆಟಗಾರರ ಕೋವಿಡ್ ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದಿರುವುದು ಪಂದ್ಯ ನಿಗದಿಯಂತೆ ನಡೆಯಲಿದೆ ಎಂಬ ವಿಶ್ವಾಸವನ್ನು ಹೆಚ್ಚಿಸಿದೆ.

ಲೀಡ್ಸ್ ನಲ್ಲಿ ನಡೆದಿದ್ದ 4ನೇ ಟೆಸ್ಟ್ ಪಂದ್ಯದ ವೇಳೆ ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿಗೆ ಕೊರೋನ ಬಾಧಿಸಿತ್ತು. ಆಗ ಶಾಸ್ತ್ರಿ ಅವರ ಮೂವರು ಸಹಾಯಕ ಸದಸ್ಯರಾದ ಭರತ್ ಅರುಣ್, ಶ್ರೀಧರ್ ಹಾಗೂ ನಿತಿನ್ ಪಟೇಲ್ ರನ್ನು ಐಸೋಲೇಶನ್ ನಲ್ಲಿ ಇಡಲಾಗಿತ್ತು.

ಭಾರತ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಶುಕ್ರವಾರ 5ನೇ ಪಂದ್ಯ ಆಡಲು ಸಿದ್ಧವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News