×
Ad

ಪ್ರತಿಭಟನೆಯನ್ನು ಪಂಜಾಬ್ ನಿಂದ ದಿಲ್ಲಿಗೆ ವರ್ಗಾಯಿಸಿ: ರೈತರಿಗೆ ಅಮರಿಂದರ್ ಸಿಂಗ್ ಮನವಿ

Update: 2021-09-13 19:39 IST

ಚಂಡೀಗಡ: ಕಳೆದ ವರ್ಷ ಆರಂಭವಾಗಿರುವ ರೈತರ ಪ್ರತಿಭಟನೆ ಪಂಜಾಬ್ ಆರ್ಥಿಕತೆಯ ಮೇಲೆ ಹೇಗೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಕುರಿತಾಗಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಇಂದು ಮೊದಲ ಬಾರಿ ತೀವ್ರ ಕಳವಳ ವ್ಯಕ್ತಪಡಿಸಿದರು.

ಆಂದೋಲನದಲ್ಲಿ ಭಾಗವಹಿಸುತ್ತಿರುವವರು ಹೊಸದಿಲ್ಲಿಯಲ್ಲಿರುವ ‘ಕೇಂದ್ರ ಸರ್ಕಾರ’ ದ ಮೇಲೆ ಕೇಂದ್ರೀಕರಿಸುವಂತೆ ಹಾಗೂ  ರಾಜ್ಯವನ್ನು ಹಾಗೂ ಅದರ ಆಡಳಿತವನ್ನು ತಮ್ಮ ಅಭಿಯಾನದಿಂದ ಹೊರಗಿಡುವಂತೆ ಅವರು ಕೇಳಿಕೊಂಡರು.

"ನೀವು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಬಯಸಿದರೆ, ನಿಮ್ಮ ಪ್ರತಿಭಟನೆಯನ್ನು ದಿಲ್ಲಿಗೆ ವರ್ಗಾಯಿಸಿ. ನೀವು ಪ್ರತಿಭಟನೆಗಳಿಂದ ಪಂಜಾಬ್‌ಗೆ ತೊಂದರೆ ನೀಡಬೇಡಿ" ಎಂದು ಪಂಜಾಬ್ ಮುಖ್ಯಮಂತ್ರಿ ಇಂದು ಹೇಳಿದರು.

"ಇಂದಿಗೂ ಸಹ, ರಾಜ್ಯದ 113 ಸ್ಥಳಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಹಾಗೂ  ಇದು ನಮ್ಮ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿದೆ" ಎಂದು ಅವರು ಹೋಶಿಯಾರ್‌ಪುರ ಜಿಲ್ಲೆಯ ಮುಖ್ಲಿಯಾನಾ ಗ್ರಾಮದಲ್ಲಿ ಸರಕಾರಿ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News