ಮಿಝೋರಾಂನಲ್ಲಿ ಏರಿಕೆಯಾಗುತ್ತಿರುವ ಕೊರೋನ ಪ್ರಕರಣ

Update: 2021-09-13 18:19 GMT

ಗುವಾಹಟಿ, ಸೆ. 13: ಚದುರಿದ ಜನಸಂಖ್ಯೆ ಇರುವ, ಪುಟ್ಟ ರಾಜ್ಯ ಮಿರೆರಾಂನಲ್ಲಿ ಕೋವಿಡ್ನ ಅತ್ಯಧಿಕ ಪಾಸಿಟಿವಿಟಿ ದರ ಮುಂದುವರೆದಿರುವುದು ವೈದ್ಯರು ಹಾಗೂ ವಿಜ್ಞಾನಿಗಳಿಗೆ ಅಚ್ಚರಿ ಉಂಟು ಮಾಡಿದೆ. ಮಿಝೋರಾಂನಲ್ಲಿ 239 ಸಾವು ಸೇರಿದಂತೆ ಒಟ್ಟು 71,922 ಕೊರೋನ ಪ್ರಕರಣಗಳು ದಾಖಲಾಗಿವೆ. ಇದು ರಾಜ್ಯದ ಒಟ್ಟು ಜನಸಂಖ್ಯೆಯ 11.2 ಲಕ್ಷದ ಶೇ. 6.5ಕ್ಕೂ ಅಧಿಕ. ರಾಜ್ಯದಲ್ಲಿ ಪ್ರತಿ ದಿನ 1,000 ಪ್ರಕರಣಗಳು ದಾಖಲಾಗುತ್ತಿವೆ. ಈಗ ಅಲ್ಲಿ 12,937 ಸಕ್ರಿಯ ಪ್ರಕರಣಗಳು ಇವೆ. 

ಪಾಸಿಟಿವಿಟಿ ದರ ಶೇ. 13ರಷ್ಟು ಹೆಚ್ಚುವರಿಯಾಗಿದೆ. ಸಕ್ರಿಯ ಪ್ರಕರಣಗಳ ಸರಾಸರಿ ಶೇ. 17.37. ಇದು ದೇಶದಲ್ಲೇ ಅತ್ಯಧಿಕ. ಮಿಝೋರಾಂನಲ್ಲಿ ಕೋರೋನ ಸೋಂಕಿನ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ತಂಡ ಧಾವಿಸಿದೆ. ‘‘ಸಂಪರ್ಕ ಪತ್ತೆ ಹಚ್ಚುವ ಮೂಲಕ ನಾವು ಕೋವಿಡ್ ಸೋಂಕು ಪ್ರಕರಣಗಳ ಸಕ್ರಿಯ ಶೋಧ ನಡೆಸುತ್ತಿದ್ದೇವೆ. ಪ್ರತಿ ಪ್ರದೇಶದ ಎಲ್ಲ ಸದಸ್ಯರನ್ನು ಒಳಗೊಂಡ ಸಾಮೂಹಿಕ ಪರೀಕ್ಷೆ ನಡೆಸುತ್ತಿದ್ದೇವೆ. ಒಂದೇ ಒಂದು ಮನೆಯನ್ನು ತಪಾಸಣೆಯಿಂದ ಹೊರತುಪಡಿಸಲು ನಾವು ಬಯಸುತ್ತಿಲ್ಲ’’ ಎಂದು ಸಮಗ್ರ ರೋಗಗಳ ಪರಿವೀಕ್ಷಣೆ ಕಾರ್ಯಕ್ರಮದ ರಾಜ್ಯ ನೋಡೆಲ್ ಅಧಿಕಾರಿ ಡಾ. ಪಚುವಾ ಲಾಲ್ಮಲ್ಸ್ವಾಮಾ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News