ಪಾಕಿಸ್ತಾನಕ್ಕೆ ರಕ್ಷಣಾ ರಹಸ್ಯ ಸೋರಿಕೆ ಆರೋಪ: ಒಡಿಶಾ ಪೊಲೀಸರಿಂದ ಡಿಆರ್ಡಿಒ ಉದ್ಯೋಗಿಗಳ ಬಂಧನ

Update: 2021-09-14 18:36 GMT

ಭುವನೇಶ್ವರ, ಸೆ. 14: ಪಾಕಿಸ್ತಾನದೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಒಡಿಸ್ಸಾ ಕರಾವಳಿಯ ಕ್ಷಿಪಣಿ ಪರೀಕ್ಷಾ ಕೇಂದ್ರದಿಂದ ನಾಲ್ವರನ್ನು ಬಂಧಿಸುವುದರೊಂದಿಗೆ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಯಲ್ಲಿ ಮತ್ತೆ ಬೇಹುಗಾರಿಕೆಯ ಆತಂಕ ಮನೆ ಮಾಡಿದೆ.

ಬೇಹುಗಾರಿಕೆ ಮಾಹಿತಿಯ ಹಿನ್ನೆಲೆಯಲ್ಲಿ ಐಜಿ (ಪೂರ್ವ ವಲಯ) ಹಿಮಾಂಶು ಲಾಲ್ ನೇತೃತ್ವದ ಒಡಿಶಾ ಪೊಲೀಸರ ವಿಶೇಷ ತಂಡ ಚಾಂಡಿಪುರ ಸಮುದ್ರದಲ್ಲಿರುವ ಡಿಆರ್ಡಿಒನ ಘಟಕ ಸಂಯೋಜಿತ ಪರೀಕ್ಷಾ ವಲಯದಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ನಾಲ್ವರನ್ನು ಮಂಗಳವಾರ ಬಂಧಿಸಿದೆ.

ಪರೀಕ್ಷಾ ಕೇಂದ್ರದಲ್ಲಿ ನಡೆಯುವ ಚಟುವಟಿಕೆಯ ಮಾಹಿತಿಗಾಗಿ ಗುತ್ತಿಗೆ ಕಾರ್ಮಿಕರನ್ನು ಹನಿ ಟ್ರಾಪ್ಗೆ ಒಳಪಡಿಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ. ಚಾಂಡಿಪುರದಲ್ಲಿ ಡಿಆರ್ಡಿಒದ ಎರಡು ಘಟಕಗಳಿವೆ. ಹಲವು ಕ್ಷಿಪಣಿಗಳು ಹಾಗೂ ಸ್ಫೋಟಕಗಳನ್ನು ಪರಿಶೀಲನೆ ನಡೆಸುವ ಪ್ರೂಫ್ ಆ್ಯಂಡ್ ಎಸ್ಟಾಬ್ಲಿಶ್ಮೆಂಟ್ (ಪಿಎಕ್ಸ್ಇ) ಹಾಗೂ ಐಟಿಆರ್.

ಏಜೆಂಟ್ನಿಂದ ಫೇಸ್ಬುಕ್ ಮೆಸೆಂಜರ್ ಮೂಲಕ ನಾವು ಮೊದಲ ಸಂದೇಶ ಸ್ವೀಕರಿಸಿದೆವು. ಅನಂತರ ಅವರು ವ್ಯಾಟ್ಸ್ಆ್ಯಪ್ ಮೂಲಕ ವಾಯಿಸ್ ಹಾಗೂ ವೀಡಿಯೊ ಕಾಲ್ಗಳಲ್ಲಿ ಮಾತನಾಡಲು ಆರಂಭಿಸಿದರು. ಏಜೆಂಟ್ಗಳು ನಕಲಿ ಹೆಸರು ಬಳಸಿದರು. ರಹಸ್ಯ ಮಾಹಿತಿಗೆ ಪರ್ಯಾಯವಾಗಿ ಹಣ ವರ್ಗಾವಣೆ ಮಾಡಿದರು. ಮೂರು ದಿನಗಳ ಕಾಲ ಅವರನ್ನು ಶೋಧಿಸಿದ ಬಳಿಕ ಚಾಂಡಿಪುರ ವ್ಯಾಪ್ತಿಯಲ್ಲಿರುವ ಮನೆಯಿಂದ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News