ಉತ್ಪಾದನೆ ಹೆಚ್ಚಳಕ್ಕಾಗಿ ಆಟೋ ವಲಯಕ್ಕೆ 26,000 ಕೋಟಿ ರೂ.ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ

Update: 2021-09-15 10:36 GMT
photo: PTI

ಹೊಸದಿಲ್ಲಿ:  ಎಲೆಕ್ಟ್ರಿಕ್ ವಾಹನಗಳು ಹಾಗೂ  ಹೈಡ್ರೋಜನ್ ಇಂಧನ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ಆಟೋ ವಲಯಕ್ಕಾಗಿ ಕೇಂದ್ರ ಸರಕಾರವು ಬುಧವಾರ  26,000 ಕೋಟಿ  ರೂ. ಮೌಲ್ಯದ ಹೊಸ ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ (ಪಿಎಲ್ ಐ) ಯೋಜನೆಯನ್ನು ಅನುಮೋದಿಸಿದೆ ಎಂದು NDTV ವರದಿ ಮಾಡಿದೆ.

 ಸರಕಾರದ ಅಂದಾಜಿನ ಪ್ರಕಾರ ಪಿಎಲ್‌ಐ ಯೋಜನೆಯು ಆಟೋ ವಲಯಕ್ಕೆ 7.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ.

ಕಳೆದ ವರ್ಷ ಸರಕಾರವು ಐದು ವರ್ಷಗಳ ಅವಧಿಗೆ  57,043 ಕೋಟಿ ರೂ. ವೆಚ್ಚದೊಂದಿಗೆ ಆಟೋಮೊಬೈಲ್ ಹಾಗೂ  ಆಟೋ ಕಾಂಪೊನೆಂಟ್ಸ್ ವಲಯದ ಯೋಜನೆಯನ್ನು ಘೋಷಿಸಿತ್ತು.

ಪಿಎಲ್ ಐ ಯೋಜನೆಯ ಅಡಿಯಲ್ಲಿ ಒಳಗೊಂಡಿರುವ ಆಟೋ ಕಾಂಪೊನೆಂಟ್ ವಿಭಾಗಗಳಲ್ಲಿ ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ ಸಿಸ್ಟಮ್, ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅಸೆಂಬ್ಲಿ, ಸೆನ್ಸರ್‌ಗಳು, ಸನ್ ರೂಫ್‌ಗಳು, ಸೂಪರ್ ಕ್ಯಾಪಾಸಿಟರ್‌ಗಳು, ಅಡಾಪ್ಟಿವ್ ಫ್ರಂಟ್ ಲೈಟಿಂಗ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಆಟೋಮ್ಯಾಟಿಕ್ ಬ್ರೇಕಿಂಗ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಹಾಗೂ ಕೊಲಿಶನ್ ವಾರ್ನಿಂಗ್ ಸಿಸ್ಟಮ್ ಗಳು ಸೇರಿವೆ.

ಆಟೋ ವಲಯದ ಪಿಎಲ್‌ಐ ಯೋಜನೆಯು 2021-22ರ ಬಜೆಟ್‌ನಲ್ಲಿ 13 ವಲಯಗಳಿಗೆ ಘೋಷಿಸಲಾಗಿರುವ ಒಟ್ಟಾರೆ ಉತ್ಪಾದನೆ-ಸಂಬಂಧಿತ ಪ್ರೋತ್ಸಾಹದ ಭಾಗವಾಗಿದ್ದು,  1.97 ಲಕ್ಷ ಕೋಟಿ ರೂ.ಗಳ ವೆಚ್ಚವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News