ನಿಮ್ಮ ಜೀವ ಕಳೆದುಕೊಳ್ಳಬೇಡಿ: ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ನೀಟ್ ಆಕಾಂಕ್ಷಿಗಳಿಗೆ ಸ್ಟಾಲಿನ್ ಮನವಿ

Update: 2021-09-15 12:38 GMT

ಚೆನ್ನೈ: ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ ಗೆ (ನೀಟ್) ಹಾಜರಾಗುವ ವಿಷಯದಿಂದ ಪೀಡಿತರಾಗಿರುವ ವಿದ್ಯಾರ್ಥಿಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಭಾವನಾತ್ಮಕ ಮನವಿ ಮಾಡಿದರು. ವಿವಾದಾತ್ಮಕ ನೀಟ್ ಪರೀಕ್ಷೆಗೆ ಸಂಬಂಧಿಸಿದ ಒಂದು ವಾರದಲ್ಲಿ ಮೂರನೇ ಆತ್ಮಹತ್ಯೆ ಪ್ರಕರಣದ ವರದಿಯನ್ನು ಅನುಸರಿಸಿ ಸ್ಟಾಲಿನ್ ಈ ಮನವಿ ಮಾಡಿದರು.

ತಮಿಳುನಾಡಿನಲ್ಲಿ ಇಂದು 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದು ವಾರದಲ್ಲಿಯೇ ಮೂರನೆಯ ಸಾವು ಸಂಭವಿಸಿದೆ. ನೀಟ್ 2021 ಗೆ ಹಾಜರಾಗಿದ್ದ ದಿನಗೂಲಿ ಕಾರ್ಮಿಕನ  ಮಗಳು ಪರೀಕ್ಷೆಯನ್ನು ಪಾಸ್ ಮಾಡುವ ಕುರಿತು ಚಿಂತಿಸುತ್ತಿದ್ದಳು. ಯುವತಿ 12 ನೇ ತರಗತಿಯಲ್ಲಿ ಶೇಕಡಾ 84.9 ಅಂಕಗಳನ್ನು ಗಳಿಸಿದ್ದಳು.

ಕಳೆದ ಕೆಲವು ವರ್ಷಗಳಲ್ಲಿ, 15 ವೈದ್ಯಕೀಯ ಆಕಾಂಕ್ಷಿಗಳು ರಾಜ್ಯದಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ.

"ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ, ದಯವಿಟ್ಟು ನಿಮ್ಮ ಜೀವನವನ್ನು ಕೊನೆಗೊಳಿಸಬೇಡಿ. ನಿನಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆ ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿ. ಪೋಷಕರು ಕೂಡ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು ಹಾಗೂ  ಒತ್ತಡ ಹೇರಬಾರದು" ಎಂದು ಮುಖ್ಯಮಂತ್ರಿ ಸ್ಟಾಲಿನ್ ತಮ್ಮ ಮನವಿಯಲ್ಲಿ ಹೇಳಿದರು.

104 ಅನ್ನು ಡಯಲ್ ಮಾಡುವ ಮೂಲಕ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಮಾತನಾಡಲು ಗಾಬರಿಗೊಂಡ ಮಕ್ಕಳಿಗೆ ಸಲಹೆ ನೀಡಿದರು.

"ವಿದ್ಯಾರ್ಥಿಗಳಿಗೆ ತೆರೆದಿರುವ ಚಿಕ್ಕ ಅವಕಾಶವನ್ನು ನೀಟ್  ಮುಚ್ಚುತ್ತದೆ. ಕೇಂದ್ರ ಸರಕಾರವು ಕಲ್ಲೆಸೆದಿದೆ. ಅದು ಕೆಳಗಿಳಿಯುತ್ತಿಲ್ಲ (ಹೇಳಿರುವ ಸ್ಥಾನದಿಂದ). ನಾವು  ನೀಟನ್ನು ಅನ್ನು ರದ್ದುಗೊಳಿಸುವ ಪರಿಸ್ಥಿತಿಯನ್ನು ಸೃಷ್ಟಿಸುತ್ತೇವೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News