ನೀಟ್ ಎಲ್ಲೆಡೆ ರದ್ದಾಗಲಿ

Update: 2021-09-15 17:55 GMT

ಮಾನ್ಯರೇ,
ತಮಿಳುನಾಡು ಸರಕಾರ ನೀಟ್(ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ರದ್ದು ಮಾಡಲು ಹೊರಟಿದ್ದು, ಬಡವರು ಮತ್ತು ಮಧ್ಯಮವರ್ಗದವರು ವೈದ್ಯಕೀಯ, ದಂತ ವೈದ್ಯಕೀಯ ಶಿಕ್ಷಣ ಪಡೆಯುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಎಲ್ಲ ವೈದ್ಯಕೀಯ ಕೋರ್ಸ್‌ಗಳಿಗೂ 12ನೇ ತರಗತಿಯಲ್ಲಿ ಪಡೆಯುವ ಅಂಕಗಳ ಆಧಾರದಲ್ಲಿಯೇ ಪ್ರವೇಶ ನೀಡುವುದರಿಂದಾಗಿ ನೀಟ್ ತರಬೇತಿ ನೆಪದಲ್ಲಿ ಸಾಕಷ್ಟು ಹಣ ದೋಚುವ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಟ್ಯೂಷನ್ ಮಾಫಿಯಾಗಳಿಗೆ ಕಡಿವಾಣ ಹಾಕಿದಂತಾಗುತ್ತದೆ.
ಬಡ ಮಕ್ಕಳು ನೀಟ್ ಟ್ಯೂಷನ್ ಶುಲ್ಕ ಭರಿಸಲು ಹೆದರಿಯೇ ವೈದ್ಯಕೀಯ ಕೋರ್ಸ್‌ಗಳ ಕನಸು ಕಾಣಲೂ ಹಿಂಜರಿಯುತ್ತಿದ್ದರು. ತಮಿಳುನಾಡಿನ ಈ ನಡೆ ಯಶಸ್ಸು ಕಂಡರೆ ಎಲ್ಲ ಅರ್ಹ ವಿದ್ಯಾರ್ಥಿಗಳೂ ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ. ತಮಿಳುನಾಡಿನ ಈ ಮಾದರಿ ಕರ್ನಾಟಕವೂ ಸೇರಿ ದೇಶದೆಲ್ಲೆಡೆ ಜಾರಿಗೆ ಬರಲಿ.
 

Writer - -ರತ್ನಾಕರ ಎಂ. ಬೆಂಗಳೂರು

contributor

Editor - -ರತ್ನಾಕರ ಎಂ. ಬೆಂಗಳೂರು

contributor

Similar News