ವಂಚನೆ, ಕ್ರಿಮಿನಲ್ ಬೆದರಿಕೆ ಆರೋಪ: ಬಾಲಿವುಡ್ ನಟ ಸಾಹಿಲ್ ಖಾನ್ ವಿರುದ್ಧದ ಎಫ್ಐಆರ್ ರದ್ದು

Update: 2021-09-15 18:29 GMT

ಮುಂಬೈ, ಸೆ.15:ಬಾಲಿವುಡ್ ನಟ ಸಾಹಿಲ್ ಖಾನ್ ವಿರುದ್ಧ ಮುಂಬೈನಲ್ಲಿ ದಾಖಲಾಗಿದ್ದ ಎರಡು ಎಫ್ಐಆರ್ಗಳನ್ನು ಬಾಂಬೆ ಹೈಕೋರ್ಟ್ ಬುಧವಾರ ತಳ್ಳಿಹಾಕಿದೆ. ಹಿರಿಯ ಬಾಲಿವುಡ್ ನಟ ಜಾಕಿಶ್ರಾಫ್ ಅವರ ಪತ್ನಿ ಆಯೇಶಾ ಶ್ರಾಫ್ ಅವರು ಸಾಹಿಲ್ ಖಾನ್ ವಿರುದ್ಧ ವಂಚನೆ ಹಾಗೂ ಕ್ರಿಮಿನಲ್ ಬೆದರಿಕೆಯ ದೂರು ನೀಡಿದ್ದರು.

ತಮ್ಮ ನಡುವಿನ ವಿವಾದಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಿರುವುದಾಗಿ ಗುರುವಾರ ಸಾಹಿಲ್ ಖಾನ್ ಅವರ ವಕೀಲ ಹಾಗೂ ಆಯೇಶಾ ಶ್ರಾಫ್ ಅವರು ನ್ಯಾಯಾಲಯಕ್ಕೆ ಬುಧವಾರ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಎಫ್ಐಆರ್ಗಳನ್ನು ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಹಾಗೂ ಎನ್.ಜೆ. ಜಾಮದಾರ್ ಅವರನ್ನೊಳಗೊಂಡ ನ್ಯಾಯಪೀಠವು ರದ್ದುಪಡಿಸಿದೆ.

ಸಾಹಿಲ್ ಖಾನ್ ತನಗೆ ನೀಡಬೇಕಾಗಿರುವ 4 ಕೋಟಿ ರೂ. ಹಣವನ್ನು ಬಾಕಿಯಿರಿಸಿದ್ದಾರೆಂದು ಆಯೇಶಾ ಶ್ರಾಫ್ ತನ್ನ ದೂರಿನಲ್ಲಿ ತಿಳಿಸಿದ್ದರು. ಆದರೆ ಇನ್ನು ಎರಡೂ ಎಫ್ಐಆರ್ಗಳಲ್ಲಿ ಮಾಡಲಾದ ಯಾವುದೇ ಆರೋಪ ಅಥವಾ ದಾವೆಯನ್ನು ಮುಂದಕ್ಕೊಯ್ಯದಿರಲು ತಾನು ನಿರ್ಧರಿಸಿರುವುದಾಗಿ ಆಕೆ ಇಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
  
ಇದೊಂದು ವ್ಯವಹಾರಕ್ಕೆ ಸಂಬಂಧಿಸಿದ ವ್ಯಾಜ್ಯವೆಂಬುದಾಗಿ ಪರಿಗಣಿಸಿದ ನ್ಯಾಯಪೀಠವು ಇತ್ತಂಡಗಳ ಹೇಳಿಕೆಯನ್ನು ದಾಖಲಿಸಿತು ಹಾಗೂ ಎರಡೂ ಎಫ್ಐಆರ್ಗಳನ್ನು ರದ್ದುಪಡಿಸಿತು. ಆದಾಗ್ಯೂ ಖಾನ್ ಅವರಿಗೆ ನ್ಯಾಯಾಲವು ಒಂದು ಕೋಟಿರೂ. ದಂಡವನ್ನು ವಿಧಿಸಿದ್ದು, ಆ ಹಣವನ್ನು ಮಹಾರಾಷ್ಟ್ರ ಶಿಶು ಕಲ್ಯಾಣ ಸಮಿತಿಗೆ ನೀಡುವಂತೆ ಸೂಚಿಸಿತು. ಬಾಲಿವುಡ್ ಚಿತ್ರ ಸ್ಟೈಲ್ನಲ್ಲಿನ ಅಭಿನಯದಿಂದಾಗಿ ಸಾಹಿಲ್ ಖಾನ್ ಚಿತ್ರಪ್ರೇಮಿಗಳ ಗಮನಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News